ಕೌಕ್ರಾಡಿ ಮಣ್ಣಗುಂಡಿಯಲ್ಲಿ ಕಾಡಾನೆ ದಾಳಿ – ಕೃಷಿ ತೋಟಗಳಿಗೆ ಭಾರೀ ಹಾನಿ

Nellyadi

ಕೌಕ್ರಾಡಿ ಮಣ್ಣಗುಂಡಿಯಲ್ಲಿ ಕಾಡಾನೆ ದಾಳಿ – ಕೃಷಿ ತೋಟಗಳಿಗೆ ಭಾರೀ ಹಾನಿ

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಪರಿಸರದಲ್ಲಿ ಕಾಡಾನೆ ಮತ್ತೊಮ್ಮೆ ಅಟ್ಟಹಾಸ ಮೆರೆಯಿದ್ದು, ಸ್ಥಳೀಯ ರೈತರ ತೋಟಗಳಿಗೆ ಭಾರೀ ಹಾನಿ ಉಂಟಾಗಿದೆ.

ಮಣ್ಣಗುಂಡಿ ನಿವಾಸಿ ರಾಜೀವಿ ಅವರ ಮನೆಯ ಬಳಿಯಲ್ಲಿದ್ದ ತೆಂಗಿನಮರ, ಅಡಿಕೆಮರ, ಬಾಳೆಗಿಡ ಸೇರಿದಂತೆ ಹಲವು ಬೆಳೆಗಳನ್ನು ಕಾಡಾನೆ ನಾಶಮಾಡಿದೆ ಎಂದು ವರದಿಯಾಗಿದೆ. ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿದ ಕಾಡಾನೆ ಮನೆ ಸಮೀಪಕ್ಕೆ ಬಂದಿರುವುದರಿಂದ ಮನೆಯವರು ಹಾಗೂ ನೆರೆಹೊರೆಯವರು ಭೀತಿಗೆ ಒಳಗಾಗಿದ್ದಾರೆ.

  •  

Leave a Reply

You May Have Missed

error: Content is protected !!