ಚೇತನ್ ಎ., ರಿಷಿಕಾ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ


ನೆಲ್ಯಾಡಿ:ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ – ಬಾಲಕಿಯರ ಕ್ರೀಡಾಕೂಟ ನ.8 ಮತ್ತು 9ರಂದು ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಈ ಕ್ರೀಡಾಕೂಟದಲ್ಲಿ ನೆಲ್ಯಾಡಿ-ಪಡುಬೆಟ್ಟು ಸರಕಾರಿ ಪ್ರೌಢ ಶಾಲೆ ಶಾಲೆಯ ಚೇತನ್. ಎ ರವರು 14ರ ವಯೋಮಾನದ ಬಾಲಕರ ವಿಭಾಗದ 400ಮೀ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಮೂಲೆಮಜಲು ಮನೆ ಅಶೋಕ್ ಕುಮಾರ್ ಮತ್ತು ಜಾನಕಿ.ಜಿ ದಂಪತಿಗಳ ಪುತ್ರ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ರಿಷಿಕಾ ರವರು ಗುಂಡು ಎಸೆತ ದಲ್ಲಿ ದ್ವಿತೀಯ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರು ಸುರೇಶ.ಪಿ ಮತ್ತು ಗಾಯತ್ರಿ ಪಾತ್ರಾಜೆ ಬಲ್ಯ ಇವರ ಪುತ್ರಿ
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ ಅವರು ತರಬೇತಿ ನೀಡುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯಶಿಕ್ಷಕಿ ಹಾಗೂ ಶಿಕ್ಷಕರು ಅಭಿನಂದಿಸಿದರು.





















Leave a Reply