ಮುಂಡೂರು ಗ್ರಾಮದಲ್ಲಿ ಚಿರತೆ ಸಂಚಾರ ಆತಂಕ ; ಅರಣ್ಯ ಇಲಾಖೆಯ ತುರ್ತು ಬೋನು ಅಳವಡಿಕೆ

ಮುಂಡೂರು ಗ್ರಾಮದಲ್ಲಿ ಚಿರತೆ ಸಂಚಾರ ಆತಂಕ — ಅರಣ್ಯ ಇಲಾಖೆಯ ತುರ್ತು ಬೋನು ಅಳವಡಿಕೆ

ಮುಂಡೂರು ಗ್ರಾಮದಲ್ಲಿ ಚಿರತೆ ಸಂಚಾರ ಆತಂಕ ; ಅರಣ್ಯ ಇಲಾಖೆಯ ತುರ್ತು ಬೋನು ಅಳವಡಿಕೆ

ವೇಣೂರು: ವೇಣೂರು ವಲಯದ ಮುಂಡೂರು ಗ್ರಾಮದಲ್ಲಿ ಚಿರತೆ ಸಂಚಾರ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಕಾಡಂಗೆ ಸುಂದರ ನಾಯ್ಕ ಅವರ ಮನೆ ಸುತ್ತಮುತ್ತ ಹಲವು ಬಾರಿ ಚಿರತೆ ಓಡಾಡುತ್ತಿರುವುದು ಗಮನಕ್ಕೆ ಬಂದ ನಂತರ, ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಂಡಿದೆ.

ವೇಣೂರು ವಲಯ ಅರಣ್ಯ ಅಧಿಕಾರಿ ಭರತ್ ಯು.ಜಿ. ಅವರ ಸೂಚನೆಯಂತೆ, ಅಳದಂಗಡಿ ಶಾಖೆಯ ಡಿ.ಆರ್.ಎಫ್.ಓ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಮಂಜುನಾಥ್, ಸಿಬ್ಬಂದಿ ವೆಂಕಪ್ಪ ನಾಯ್ಕ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ಬೋನು ಅಳವಡಿಸುವ ಕಾರ್ಯ ಕೈಗೊಂಡಿದ್ದಾರೆ.

  •  

Leave a Reply

You May Have Missed

error: Content is protected !!