ಬಂಟ್ವಾಳ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ಉಚಿತ ಆರೋಗ್ಯ ತಪಾಸಣಾ ಶಿಬಿರ

ನೇಸರ ಮಾ.15: ಜೇಸಿಐ ಬಂಟ್ವಾಳ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಿ.ಮೂಡ ಕೈಕಂಬದ ಜಂಟಿ ಆಶ್ರಯದಲ್ಲಿ ಈ ತಿಂಗಳ 5ನೇ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವೂ ಬಾರೇಕಡು ಅಂಗನವಾಡಿ ಕೇಂದ್ರದಲ್ಲಿ ಜರುಗಿತು.

ವೀಕ್ಷಿಸಿ Subscribers ಮಾಡಿ

ಜೇಸಿಐ ಬಂಟ್ವಾಳದ ಅಧ್ಯಕ್ಷ ಜೇಸಿ.ರೋಶನ್ ರೈ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು, ಎ.ಜೆ.ಸಂಸ್ಥೆಯ ವೈದ್ಯಾಧಿಕಾರಿ ಡಾ.ಸುಶಾಂತ ರವರು ಪ್ರಾಸ್ತಾವಿಕ ಮಾತನಾಡಿದರು, ಜೇಸಿಐ ಬಂಟ್ವಾಳದ ನಿಕಟ ಪೂರ್ವಅಧ್ಯಕ್ಷ ಜೇಸಿ ಉಮೇಶ್ ಆರ್ ಮೂಲ್ಯ ಧನ್ಯವಾದವಿತ್ತರು. ಜೇಸಿ ವಲಯ ಅಧಿಕಾರಿ ಜೇಸಿ ಸಂತೋಷ್ ಜೈನ್, ಲೇಡಿ ಜೇಸಿ ನಿರ್ದೇಶಕಿ ಜೇಸಿ ದೀಪ್ತಿ ರೈ, ಉಪಾಧ್ಯಕ್ಷ ಜೇಸಿ ರಾಜೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ,ಎ.ಜೆ.ಸಂಸ್ಥೆಯ ವೈದ್ಯರು, ಸಿಬ್ಬಂದಿಗಳು, ಜೇಸಿ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!