ನೆಲ್ಯಾಡಿ ಗ್ರಾ.ಪಂ.ಹಸಿಮೀನು ಮಾರಾಟ 5.64 ಲಕ್ಷ ರೂ., ಸಂತೆ ವಸೂಲಿ ಹಕ್ಕು 1.65 ಲಕ್ಷ ರೂ.ಗೆ ಏಲಂ

ನೆಲ್ಯಾಡಿ ಗ್ರಾ.ಪಂ.ಹಸಿಮೀನು ಮಾರಾಟ 5.64 ಲಕ್ಷ ರೂ., ಸಂತೆ ವಸೂಲಿ ಹಕ್ಕು 1.65 ಲಕ್ಷ ರೂ.ಗೆ ಏಲಂ

ನೆಲ್ಯಾಡಿ ಗ್ರಾ.ಪಂ.ಹಸಿಮೀನು ಮಾರಾಟ 5.64 ಲಕ್ಷ ರೂ., ಸಂತೆ ವಸೂಲಿ ಹಕ್ಕು 1.65 ಲಕ್ಷ ರೂ.ಗೆ ಏಲಂ

ನೆಲ್ಯಾಡಿ: ನೆಲ್ಯಾಡಿ ಸಂತೆಕಟ್ಟೆ ಬಳಿ ಇರುವ ನೆಲ್ಯಾಡಿ ಗ್ರಾ.ಪಂ.ನ ಹಸಿಮೀನು ಮಾರಾಟದ 3 ಸ್ಟಾಲ್‌ಗಳು ಒಟ್ಟು ರೂ.5.64 ಲಕ್ಷಕ್ಕೆ ಹಾಗೂ ವಾರದ ಸಂತೆಯಲ್ಲಿ ಶುಲ್ಕ ವಸೂಲಿ ಹಕ್ಕು ರೂ.1.65 ಲಕ್ಷಕ್ಕೆ ಖಾಯಂ ಆಗಿದೆ. ಏಲಂ ಪ್ರಕ್ರಿಯೆ ನ.18ರಂದು ಗ್ರಾ.ಪಂ.ಅಧ್ಯಕ್ಷ ಯಾಕುಬ್ ಯಾನೆ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.

ಹಸಿಮೀನು ಮಾರಾಟ;
ನ.19,2025 ರಿಂದ ನ.17,2026ರ ತನಕದ 1 ವರ್ಷದ ಅವಧಿಗೆ ಹಸಿಮೀನು ಮಾರಾಟದ ನೆಲ್ಯಾಡಿ ಸಂತೆಕಟ್ಟೆ ಬಳಿಯ ಸ್ಟಾಲ್-1 ರೂ.1.27 ಲಕ್ಷಕ್ಕೆ ಬಿನುಚಾಕೋ ಎಂಬವರಿಗೆ, ಸ್ಟಾಲ್-2 ರೂ.2.36 ಲಕ್ಷಕ್ಕೆ ಇಲ್ಯಾಸ್ ಎನ್. ಎಂಬವರಿಗೆ ಹಾಗೂ ಸ್ಟಾಲ್ ನಂ-3 ರೂ.2.01 ಲಕ್ಷಕ್ಕೆ ಬಿನುಚಾಕೋ ಎಂಬವರಿಗೆ ಖಾಯಂ ಆಗಿದೆ. ಮೂರು ಸ್ಟಾಲ್‌ಗಳು ಒಟ್ಟು 5.64 ಲಕ್ಷ ರೂ.ಗೆ ಖಾಯಂ ಆಗಿದೆ. ಮಹಮ್ಮದ್ ಹನೀಫ್, ಜಗದೀಶ್ ಮಾರ್ಲ, ಇಲ್ಯಾಸ್ ಯು., ವಿ.ಜೆ.ಮ್ಯಾಥ್ಯು, ರೈಫ್ ಕರಾವಳಿ, ಮಹಮ್ಮದ್ ಶಾಕೀರ್, ಉಸ್ಮಾನ್ ಬಿನ್ ಯೂಸುಫ್, ಅಬ್ರಹಾಂ ಕೆ.ಪಿ., ಗಣೇಶ ಪೂಜಾರಿ, ಇಸ್ಮಾಯಿಲ್ ಬಿನ್ ಮಹಮ್ಮದ್, ಶುಕೂರು, ದಿನಕರ, ಶಾಜಿ, ನಾಸಿರ್ ಬಿನ್ ಹಮೀದ್ ಅವರು ಹಸಿಮೀನು ಮಾರುಕಟ್ಟೆ ಏಲಂ ಪ್ರಕ್ರಿಯೆಯಲ್ಲಿ ಬಿಡ್ಡುದಾರರಾಗಿ ಭಾಗವಹಿಸಿದ್ದರು.

ಸಂತೆ ವಸೂಲಿ;
ನ.19, 2025ರಿಂದ ನ.17,2026ರ ತನಕದ ಒಂದು ವರ್ಷದ ಅವಧಿಗೆ ವಾರದ ಸಂತೆಯಲ್ಲಿ ಶುಲ್ಕ ವಸೂಲಿ ಹಕ್ಕು ಮಹಮ್ಮದ್ ಹನೀಫ್ ಎಂಬವರಿಗೆ ರೂ. 1.65 ಲಕ್ಷಕ್ಕೆ ಖಾಯಂ ಆಗಿದೆ. ಇಲ್ಯಾಸ್ ಎನ್., ಅಬ್ಬಾಸ್ ಬಿನ್ ಇಬ್ರಾಹಿಂ, ಮಹಮ್ಮದ್ ಶಾಕೀರ್, ಬಿನು ಚಾಕೋ, ಅಬ್ರಹಾಂ ಕೆ.ಪಿ., ಗಣೇಶ ಪೂಜಾರಿ, ಶುಕೂರು, ದಿನಕರ ಬಿಡ್ಡುದಾರರಾಗಿ ಭಾಗವಹಿಸಿದ್ದರು.

ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯರಾದ ಅಬ್ದುಲ್ ಜಬ್ಬಾರ್, ಪ್ರಕಾಶ್ ಕೆ. ಉಪಸ್ಥಿತರಿದ್ದರು. ಪಿಡಿಒ ಜಯರಾಜ್ ಕೆ. ಏಲಂ ಪ್ರಕ್ರಿಯೆ ನಡೆಸಿದರು. ಕಾರ್ಯದರ್ಶಿ ಭಾರತಿ ಸ್ವಾಗತಿಸಿದರು. ಹಿರಿಯ ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಇತರೇ ಸಿಬ್ಬಂದಿಗಳು ಸಹಕರಿಸಿದರು.

  •  

Leave a Reply

You May Have Missed

error: Content is protected !!