ಕೊಕ್ಕಡದಲ್ಲಿ ಆರ್ಕಿಟೆಕ್ಚರಲ್ ಡಿಸೈನ್ ಉದ್ಘಾಟನೆ; ಊರು ಅಭಿವೃದ್ಧಿಗೆ ಉದ್ಯಮ ಪೂರಕ-ಯು.ಟಿ. ಖಾದರ್

ಕೊಕ್ಕಡದಲ್ಲಿ ಆರ್ಕಿಟೆಕ್ಚರಲ್ ಡಿಸೈನ್ ಉದ್ಘಾಟನೆ; ಊರು ಅಭಿವೃದ್ಧಿಗೆ ಉದ್ಯಮ ಪೂರಕ-ಯು.ಟಿ. ಖಾದರ್

ಕೊಕ್ಕಡದಲ್ಲಿ ಆರ್ಕಿಟೆಕ್ಚರಲ್ ಡಿಸೈನ್ ಉದ್ಘಾಟನೆ; ಊರು ಅಭಿವೃದ್ಧಿಗೆ ಉದ್ಯಮ ಪೂರಕ-ಯು.ಟಿ. ಖಾದರ್

ನೆಲ್ಯಾಡಿ: ಊರು, ಹಳ್ಳಿ ಬೆಳೆಯಬೇಕಾದರೆ ಅಲ್ಲಿ ಹೊಸ ಉದ್ಯಮ, ವ್ಯಾಪಾರ, ವ್ಯವಹಾರ ಬೆಳೆಯಬೇಕು, ಹಾಗಾದಾಗ ಚಿಕ್ಕ ಹಳ್ಳಿಯೂ ಪಟ್ಟಣವಾಗಿ ಬೆಳೆಯುತ್ತದೆ, ತನ್ಮೂಲಕ ಉದ್ಯೋಗ ಸೃಷ್ಠಿಯಾಗುತ್ತದೆ, ಮುಂದೆ ಅದು ಊರಿನ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಅವರು ಕೊಕ್ಕಡದಲ್ಲಿ ನೂತನವಾಗಿ ಆರಂಭಗೊಂಡ ಕೆ.ಎನ್.ಕ್ಯೂ. ಆರ್ಕಿಟೆಕ್ಚರಲ್ ಡಿಸೈನ್ ಮತ್ತು ಕನ್ಸ್ಟ್ರಕ್ಷನ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಕೊಕ್ಕಡದಂತಹ ಗ್ರಾಮೀಣ ಪ್ರದೇಶದಲ್ಲಿ ಇಲ್ಲಿನ ಬೇಡಿಕೆಗೆ ಅನುಗುಣವಾಗಿ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.

ಸಮಾರಂಭದಲ್ಲಿ ಪಟ್ಟೂರು ಅಲ್ ಹಸನಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಶಾಫಿ ಸಖಾಫಿ ದುವಾಃ ನೆರವೇರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಸೌತಡ್ಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ನೆಲ್ಯಾಡಿ ಕಾಮಧೇನು ಮಹಿಳಾ ಸಂಘದ ಅಧ್ಯಕ್ಷೆ ಉಷಾ ಅಂಚನ್, ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಸೀಫ್, ಕಟ್ಟಡ ಮಾóಲಕ ವಸಂತ ರಾವ್, ಉದ್ಯಮಿಗಳಾದ ಇಬ್ರಾಹಿಂ ಮೋನು ಪಿಲಿಗೂಡು, ಸಿದ್ದಿಕ್ ನೆಲ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಯೂಸುಫ್ ತೌಸೀಫ್ ಸ್ವಾಗತಿಸಿ, ತಸ್ಲೀಮ್ ಆರಿಫ್ ವಂದಿಸಿದರು. ಶಾಹುಲ್ ಅಮೀರ್ ನಿರೂಪಿಸಿದರು.

  •  

Leave a Reply

You May Have Missed

error: Content is protected !!