ಶಿಬಾಜೆ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಳದ ರಾಜಾಂಗಣ ನಿರ್ಮಾಣಕ್ಕೆ ಧರ್ಮಸ್ಥಳದಿಂದ 5 ಲಕ್ಷ ದೇಣಿಗೆ

ಶಿಬಾಜೆ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಳದ ರಾಜಾಂಗಣ ನಿರ್ಮಾಣಕ್ಕೆ ಧರ್ಮಸ್ಥಳದಿಂದ 5 ಲಕ್ಷ ದೇಣಿಗೆ

ಶಿಬಾಜೆ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಳದ ರಾಜಾಂಗಣ ನಿರ್ಮಾಣಕ್ಕೆ ಧರ್ಮಸ್ಥಳದಿಂದ 5 ಲಕ್ಷ ದೇಣಿಗೆ

ಕೊಕ್ಕಡ: ಸುತ್ತಮುತ್ತಲಿನ ಭಕ್ತರ ಆಶಯವನ್ನು ಪ್ರತಿಬಿಂಬಿಸುವಂತೆ ನಿರ್ಮಾಣವಾಗುತ್ತಿರುವ ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಳದ ರಾಜಾಂಗಣ ಸುಮಾರು 30 ಲಕ್ಷ ವೆಚ್ಚದಲ್ಲಿ ಅಂತಿಮ ಹಂತಕ್ಕೆ ಕಾಲಿಟ್ಟಿದೆ. ರಾಜಾಂಗಣ ಕಾಮಗಾರಿಗೆ ನೆರವಾಗುವ ಉದ್ದೇಶದಿಂದ ದೇವಳದ ವ್ಯವಸ್ಥಾಪನ ಸಮಿತಿ ಹಾಗೂ ಊರ ಪ್ರಮುಖರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇಣಿಗೆ ನೀಡುವಂತೆ ವಿನಂತಿಸಿದ್ದರು.

ವಿನಂತಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆದೇಶದಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂಪಾಯಿ ಮೊತ್ತದ ಡಿ.ಡಿ.ಯನ್ನು ದೇವಳಕ್ಕೆ ಹಸ್ತಾಂತರಿಸಲಾಯಿತು.

ಯೋಜನಾಧಿಕಾರಿ ಯಶೋಧರ್, ಅರಸಿನಮಕ್ಕಿ ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿ ಯೋಗೀಶ್ ಬೇಂಗಳ, ಅರುಣಾ ಗಣೇಶ್, ಹಾಗೂ ತಾಲೂಕು ಜನಜಾಗೃತಿ ಸದಸ್ಯ ಹೆಚ್. ಎಸ್. ಚೆನ್ನಪ್ಪ ಗೌಡ ಅವರು ದೇವಳದ ವ್ಯವಸ್ಥಾಪನ ಸಮಿತಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಅಣ್ಣು ಗೌಡ, ನಿಕಟ ಪೂರ್ವ ಅಧ್ಯಕ್ಷ ರಾಮ್ಮಣ್ಣ ಪೂಜಾರಿ ಪೆರ್ಲ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ, ಸಮಿತಿ ಸದಸ್ಯರಾದ ಬಾಲಚಂದ್ರ ಶೆಟ್ಟಿಗಾರ್, ಸುಂದರ ಎಂ.ಕೆ, ವಸಂತ ಗೌಡ, ಇ.ವಿ. ಸತೀಶ್, ಗಂಗಾಧರ ಗೌಡ, ಹಾಗೂ ದೇವಳದ ಅರ್ಚಕರಾದ ಶ್ರೀಧರ್ ಉಪಾಧ್ಯಾಯ, ರಾಜೇಶ್ ಭಟ್ ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!