ನೆಲ್ಯಾಡಿಯಲ್ಲಿ ಎಲೈಟ್ ಬ್ಯಾಡ್ಮಿಂಟನ್ ಅಕಾಡೆಮಿಯಿಂದ ಬ್ಯಾಡ್ಮಿಂಟನ್ ಕೋಚಿಂಗ್ ತರಗತಿ ಪ್ರಾರಂಭ

ನೆಲ್ಯಾಡಿಯಲ್ಲಿ ಎಲೈಟ್ ಬ್ಯಾಡ್ಮಿಂಟನ್ ಅಕಾಡೆಮಿಯಿಂದ ಬ್ಯಾಡ್ಮಿಂಟನ್ ಕೋಚಿಂಗ್ ತರಗತಿ ಪ್ರಾರಂಭ

ನೆಲ್ಯಾಡಿಯಲ್ಲಿ ಎಲೈಟ್ ಬ್ಯಾಡ್ಮಿಂಟನ್ ಅಕಾಡೆಮಿಯಿಂದ ಬ್ಯಾಡ್ಮಿಂಟನ್ ಕೋಚಿಂಗ್ ತರಗತಿ ಪ್ರಾರಂಭ

ರಾಷ್ಟ್ರೀಯ ಮಟ್ಟದ ಅರ್ಹತಾ ಪಡೆದ ನಿವೃತ್ತ ಕೋಚ್ ಮೂಲಕ ತರಬೇತಿ – ನೋಂದಣಿ ಆರಂಭ

ನೆಲ್ಯಾಡಿ: ಎಲೈಟ್ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಎಲೈಟ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಬ್ಯಾಡ್ಮಿಂಟನ್ ತರಬೇತಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ ಈ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ.

ಡಿ.24ರಿಂದ ಬ್ಯಾಡ್ಮಿಂಟನ್ ಕೋಚಿಂಗ್ ತರಗತಿಗಳು ಪ್ರಾರಂಭವಾಗಲಿದ್ದು, ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. 8 ವರ್ಷ ಮೇಲ್ಪಟ್ಟ ಬಾಲಕ–ಬಾಲಕಿಯರು ಈ ತರಬೇತಿ ತರಗತಿಗಳಿಗೆ ಸೇರಿಕೊಳ್ಳಬಹುದಾಗಿದೆ.

ರಾಷ್ಟ್ರೀಯ ಮಟ್ಟದ ಅರ್ಹತೆ ಹೊಂದಿರುವ ನಿವೃತ್ತ ಬ್ಯಾಡ್ಮಿಂಟನ್ ಕೋಚ್ ತರಗತಿಗಳನ್ನು ನಡೆಸಲಿದ್ದು, ಕ್ರೀಡಾ ಕೌಶಲ್ಯ ವಿಕಸನ, ತಂತ್ರಜ್ಞಾನಾಧಾರಿತ ಆಟದ ತರಬೇತಿ ಹಾಗೂ ಶಿಸ್ತುಬದ್ಧ ಅಭ್ಯಾಸಕ್ಕೆ ವಿಶೇಷ ಒತ್ತು ನೀಡಲಾಗುತ್ತದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ಶುಲ್ಕ ವಿವರ:
17 ವರ್ಷದೊಳಗಿನ ಬಾಲಕ–ಬಾಲಕಿಯರು (ಪ್ರತಿ ವಿದ್ಯಾರ್ಥಿ): ತಿಂಗಳಿಗೆ ₹1500
17 ವರ್ಷ ಮೇಲ್ಪಟ್ಟವರು (ಪ್ರತಿ ವಿದ್ಯಾರ್ಥಿ): ತಿಂಗಳಿಗೆ ₹2000
(ಶುಲ್ಕದಲ್ಲಿ ಶಟಲ್ ಕಾಕ್ ವ್ಯವಸ್ಥೆಯೂ ಒಳಗೊಂಡಿರುತ್ತದೆ.)

ತರಗತಿ ಸಮಯ:
ಬ್ಯಾಚ್–1: ಬೆಳಗ್ಗೆ 6.30ರಿಂದ 8.30ರವರೆಗೆ (15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ)
ಬ್ಯಾಚ್–2: ಸಂಜೆ 4.30ರಿಂದ 6.30ರವರೆಗೆ (15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ)
ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿರುವುದರಿಂದ ಆಸಕ್ತರು ಶೀಘ್ರದಲ್ಲೇ ನೋಂದಣಿ ಮಾಡಿಕೊಳ್ಳುವಂತೆ ಅಕಾಡೆಮಿ ಆಡಳಿತ ಮಂಡಳಿ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಸಂಪರ್ಕಿಸಬಹುದು:
ಶಿಬು ವರ್ಗೀಸ್: 9880799635, ಶ್ರೀಜಿತ್: 8296764376

  •  
Previous post

ನೆಲ್ಯಾಡಿ: ತೋಟದಲ್ಲಿ ಹುಲ್ಲು ಕೊಯ್ಯುತ್ತಿರುವ ವೇಳೆ ಕಾಡುಹಂದಿ ದಾಳಿ- ಮಹಿಳೆಗೆ ತೀವ್ರ ಗಾಯ

Next post

ಎಸ್.ಡಿ.ಎಂ ಶಿಕ್ಷಣ ಕ್ರಾಂತಿಯ ಮೌನಶಿಲ್ಪಿ; ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ, ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪ್ರೊ.ಎಸ್. ಪ್ರಭಾಕರ್ ನಿಧನ

Leave a Reply

You May Have Missed

error: Content is protected !!