ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ


ನೆಲ್ಯಾಡಿ: ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಇದರ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವವು ಮಂಗಳವಾರದಂದು ಗೌರವಾಧ್ಯಕ್ಷರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸುಬ್ರಮಣ್ಯ ಮಠ ಇವರ ಕೃಪಾ ಆಶೀರ್ವಾದದೊಂದಿಗೆ ಕುಂಟುಕುಡೇಲು ರಾಘವ ತಂತ್ರಿಗಳ ಪೌರೋಹಿತ್ಯದಲ್ಲಿ ನಡೆಯಿತು.
ಬೆಳಗ್ಗೆ ಗಂಟೆ 7ರಿಂದ ನಿತ್ಯ ಪೂಜೆ, ಪ್ರಾರ್ಥನೆ, ಗಣಹೋಮ, ಸಾನಿಧ್ಯ ಕಳಶ, ಪ್ರಾಯಶ್ಚಿತ್ತ ಹೋಮ, ಪ್ರಾಯಶ್ಚಿತ್ತ ಕಲಶಾಭಿಷೇಕ, ಸಾನಿಧ್ಯಕಲಶಾಭಿಷೇಕ, ಸಾನಿಧ್ಯ ಹೋಮ. ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 7ರಿಂದ ಭಜನಾ ಕಾರ್ಯಕ್ರಮ, ಶ್ರೀ ದುರ್ಗಾಪೂಜೆ ಬಳಿಕ ಮಹಾರಂಗಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ಉಪಾಧ್ಯಕ್ಷ ರಘುನಾಥ.ಕೆ ಪದ್ಮಾರ್ಪಿತ, ಪ್ರಧಾನ ಕಾರ್ಯದರ್ಶಿ ರಾಕೇಶ್.ಎಸ್, ಕೋಶಾಧಿಕಾರಿ ಸುಧೀರ್ ಕುಮಾರ್ ಕೆ.ಎಸ್, ಜೊತೆ ಕಾರ್ಯದರ್ಶಿ ರಮೇಶ್ ಬಾಣಜಾಲು, ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ, ಸಹ ಅರ್ಚಕ ಅಶ್ವಥ್ ನಾರಾಯಣ ತೋಡ್ತಿಲ್ಲಾಯ, ಗೌರವ ಸಲಹೆಗಾರದ ಸದಾನಂದ ಕುಂದರ್, ಶಿವದಾಸ್ ಮತ್ತು ಆಡಳಿತ ಮಂಡಳಿ ಸರ್ವ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.





















Leave a Reply