ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ನಕ್ಷತ್ರದಂದು ದಾಖಲೆ 1400 ಆಶ್ಲೇಷ ಬಲಿ ಸೇವೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ನಕ್ಷತ್ರದಂದು ದಾಖಲೆ 1400 ಆಶ್ಲೇಷ ಬಲಿ ಸೇವೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ನಕ್ಷತ್ರದಂದು ದಾಖಲೆ 1400 ಆಶ್ಲೇಷ ಬಲಿ ಸೇವೆ

ಸುಬ್ರಮಣ್ಯ: ಭಾರತದ ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರವಾದ ಮಂಗಳವಾರ ದಾಖಲೆಯ 1400 ಆಶ್ಲೇಷ ಬಲಿ ಸೇವೆಗಳು ನೆರವೇರಿದವು. ಮಂಗಳವಾರವು ಸುಬ್ರಹ್ಮಣ್ಯನಿಗೆ ವಿಶೇಷ ದಿನವಾಗಿರುವುದರೊಂದಿಗೆ ಆಶ್ಲೇಷ ನಕ್ಷತ್ರವೂ ಈ ದಿನವೇ ಬಂದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.

ನಿನ್ನೆ ದಿನದಿಂದಲೇ ಭಕ್ತರ ಆಗಮನ ಆರಂಭಗೊಂಡಿದ್ದು, ಇಂದು ಬೆಳಗ್ಗೆ 6.30 ಗಂಟೆಗೆ ಆಶ್ಲೇಷ ಬಲಿ ಸೇವೆ ಪ್ರಾರಂಭವಾಗಿ ನಿರಂತರವಾಗಿ ನಾಲ್ಕು–ಐದು ಬ್ಯಾಚುಗಳಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಸೇವೆ ನಡೆಯಿತು. ಬಳಿಕ ಸಂಜೆ 5 ಗಂಟೆ ನಂತರ ಮತ್ತೊಂದು ಬ್ಯಾಚಿನಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿತು.

ಕುಕ್ಕೆ ಕ್ಷೇತ್ರದ ಒಳಾಂಗಣ, ಹೊರಾಂಗಣ, ರಥಬೀದಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಕ್ತರ ಭಾರೀ ಜಮಾವಣೆ ಕಂಡುಬಂತು. ವಾಹನ ನಿಲುಗಡೆ ಸ್ಥಳಗಳು ಸಂಪೂರ್ಣವಾಗಿ ವಾಹನಗಳಿಂದ ತುಂಬಿದ್ದವು. ಭಕ್ತರ ಸುಗಮ ದರ್ಶನ ಹಾಗೂ ಸೇವೆಗಾಗಿ ಶ್ರೀ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಭದ್ರತಾ ಸಿಬ್ಬಂದಿಗಳು, ಹೋಂ ಗಾರ್ಡ್ಸ್ ಮತ್ತು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದರು. ಯಾವುದೇ ಅಡಚಣೆ ಇಲ್ಲದೆ ಸೇವೆಗಳು ಯಶಸ್ವಿಯಾಗಿ ನಡೆದವು.

  •  

Leave a Reply

You May Have Missed

error: Content is protected !!