ಕೊಕ್ಕಡ-ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ‘ಭ್ರಾತೃತ್ವ ಭಾನುವಾರ’

ಕೊಕ್ಕಡ-ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ‘ಭ್ರಾತೃತ್ವ ಭಾನುವಾರ’ ವೈಭವ

ಕೊಕ್ಕಡ-ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ‘ಭ್ರಾತೃತ್ವ ಭಾನುವಾರ’

ಕೊಕ್ಕಡ: ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದ ವಾರ್ಷಿಕ ಹಬ್ಬದ ಅಂಗವಾಗಿ ಫೆ.8ರಂದು ಭಕ್ತಿಭಾವ, ಭ್ರಾತೃತ್ವ ಮತ್ತು ಏಕತೆ ತುಂಬಿದ “ಭ್ರಾತೃತ್ವ ಭಾನುವಾರ” ವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು.

ದೇವಾಲಯದ ಧರ್ಮಗುರು ವಂ.ಅನಿಲ್ ಪ್ರಕಾಶ್ ಡಿಸಿಲ್ವಾ ಅವರ ಪ್ರಸನ್ನ ಸಾನ್ನಿಧ್ಯದಲ್ಲಿ, ಮಂಗಳೂರು ಜೆಪ್ಪುವಿನ ಸಂತ ಜೋಸೆಫ್ ಸೆಮಿನರಿಯ ರೆಕ್ಟರ್‌ ವಂ.ರಾಜೇಶ್ ಮೆಲ್ವಿನ್ ರೊಸಾರಿಯೊ ಅವರು ದಿವ್ಯಬಲಿಪೂಜೆಯನ್ನು ಅರ್ಪಿಸಿದರು. ನಂತರ ನಡೆದ ಪರಮಪ್ರಸಾದ ಆರಾಧನೆ ಮತ್ತು ಕೊಕ್ಕಡ–ಜೋಡುಮಾರ್ಗದ ವರೆಗೆ ಭವ್ಯ ಮೆರವಣಿಗೆ ನಡೆಯಿತು. ನಾಡಿನ ಸಮಸ್ತ ಜನತೆಗೆ ದೇವರ ಕೃಪಾಶೀರ್ವಾದಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ ಸೇವಾದರ್ಶಿ ಸ್ಟೀವನ್ ರೊಡ್ರಿಗಸ್, ಬೆಥನಿ ಕಾಲೇಜು ನೆಲ್ಯಾಡಿ ಪ್ರಾಂಶುಪಾಲ ವಂ.ವರ್ಗೀಸ್ ಕೈಪನಡ್ಕ, ಕೊಕ್ಕಡ ಸಂತ ಫ್ರಾನ್ಸಿಸ್ ಶಾಲೆಯ ಧರ್ಮಗುರು ವಂ.ಜಿಬಿನ್ ಹಾಗೂ ಅರುಣ್ ಉಪಸ್ಥಿತರಿದರು.

Leave a Reply

You May Have Missed

error: Content is protected !!