ಕೌಕ್ರಾಡಿ: ಫಲಾನುಭವಿಗಳಿಗೆ ಫ್ಯಾನ್ ವಿತರಣೆ

ಕೌಕ್ರಾಡಿ: ಫಲಾನುಭವಿಗಳಿಗೆ ಫ್ಯಾನ್ ವಿತರಣೆ

ಕೌಕ್ರಾಡಿ: ಫಲಾನುಭವಿಗಳಿಗೆ ಫ್ಯಾನ್ ವಿತರಣೆ

ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯತ್ ವತಿಯಿಂದ ಎಸ್ಸಿ/ಎಸ್ಟಿ ಅನುದಾನದಡಿ ಇಚ್ಲಂಪಾಡಿ ಒಂದನೇ ವಾರ್ಡಿನ 20 ಫಲಾನುಭವಿಗಳಿಗೆ ಫ್ಯಾನ್ ವಿತರಣೆ ಕಾರ್ಯಕ್ರಮ ನಡೆಯಿತು. ಸಮಾಜದ ಹಿಂದುಳಿದ ವರ್ಗದ ಮನೆಗಳಿಗೆ ಅಗತ್ಯ ಸೌಕರ್ಯ ಒದಗಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರು ಹಾಗೂ ಪಂಚಾಯತ್ ಪ್ರತಿನಿಧಿಗಳು ಹರ್ಷ ವ್ಯಕ್ತಪಡಿಸಿದರು.

ವಿತರಣಾ ಸಮಾರಂಭದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಕೆ.ಟಿ. ವಲ್ಸಮ್ಮ ಅವರು ಭಾಗವಹಿಸಿ ಫಲಾನುಭವಿಗಳಿಗೆ ಪ್ರೋತ್ಸಾಹ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಡೈಸಿ ವರ್ಗಿಸ್, ರೊಯ್ ಟಿ.ಎಮ್., ರತ್ನವತಿ, ದಿನೇಶ್ ಬರಮೆಲು, ಕೆ.ಡಿ.ಪಿ ಸದಸ್ಯ ಗಿರೀಶ್ ಸಾಲಿಯಾನ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸತೀಶ್ ಪಳಿಕೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ವರ್ಗಿಸ್ ಅಬ್ರಹಾಂ, ಸುನೀಶ್ ಟಿ.ಪಿ., ಅಲೆಕ್ಸ್ ವರ್ಗಿಸ್ ಅಲಂಗ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Previous post

‘ಸಾರಥಿ’ ಗಳಿಗೆ ಬಂಪರ್ ರಿಯಾಯಿತಿ ..! ಚಾಲಕರಿಗೆ ‘ತಿರುಮಲ ಹೋಂಡಾ’ ಶೋರೂಮ್ ಗಳಲ್ಲಿ ಯಾವುದೇ ಹೋಂಡಾ ದ್ವಿಚಕ್ರ ಖರೀದಿಗೆ ರೂ.2500 ಡಿಸ್ಕೌಂಟ್

Next post

ಇಚ್ಲಂಪಾಡಿ: ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ 54ನೇ ವರ್ಷದ “ಮಹಾಶಿವರಾತ್ರಿ ಮಹೋತ್ಸವ”

Leave a Reply

You May Have Missed

error: Content is protected !!