ಫೆ.14–15; ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ: ಸ್ವಾಮಿ ಕೊರಗಜ್ಜ ದೈವದ ಕೋಲ

ಕೊಕ್ಕಡ: ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಫೆ.14–15ರಂದು ವಾರ್ಷಿಕ ನೇಮೋತ್ಸವ: ಸ್ವಾಮಿ ಕೊರಗಜ್ಜ ದೈವದ ಕೋಲ

ಫೆ.14–15; ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ: ಸ್ವಾಮಿ ಕೊರಗಜ್ಜ ದೈವದ ಕೋಲ

ಕೊಕ್ಕಡ: ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಫೆ.14 ಮತ್ತು 15ರಂದು ಭಕ್ತಿಭಾವದಿಂದ ವಾರ್ಷಿಕ ನೇಮೋತ್ಸವ ಜರುಗಲಿದ್ದು, ದೈವದ ಕೋಲ, ಗರಡಿ ಇಳಿಯುವಿಕೆ ಮತ್ತು ಅಗೇಲು ಸೇವೆಗಳ ಜರುಗಲಿದೆ.

ಫೆ.14ರಂದು ಬೆಳಗ್ಗೆ 8ಕ್ಕೆ ಸ್ಥಳ ಶುದ್ಧಿ ಮತ್ತು ಗಣ ಹೋಮ. ಸಂಜೆ 5.30ರಿಂದ ಕುಣಿತ–ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8ಕ್ಕೆ ಅನ್ನಸಂತರ್ಪಣೆಯ ಬಳಿಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವಗಳ ಗರಡಿ ಇಳಿಯಲಿದೆ. ನಂತರ ರಾತ್ರಿ 12ಕ್ಕೆ ಶ್ರೀ ತನ್ನಿಮಾನಿಗ ದೈವದ ಗರಡಿ ಇಳಿಯುವ ಮಹತ್ವದ ವಿಧಿ ಜರುಗಲಿದೆ.

ಫೆ.15ರಂದು ಬೆಳಿಗ್ಗೆ 7ಕ್ಕೆ ಸ್ವಾಮಿ ಕೊರಗಜ್ಜ ದೈವದ ಕೋಲ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಭಕ್ತರ ಹರಕೆಗಳ ಅಗೇಲು ಸೇವೆ ಜರುಗಲಿದ್ದು, ಬಳಿಕ ಅನ್ನಸಂತರ್ಪಣೆಯೊಂದಿಗೆ ನೇಮೋತ್ಸವದ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ.

ನೇಮೋತ್ಸವದ ಬಗ್ಗೆ ಸಮಿತಿ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ, ಪ್ರಧಾನ ಕಾರ್ಯದರ್ಶಿ ದೀಕ್ಷಾ ಸಾಲ್ಯಾನ್, ಕೋಶಾಧಿಕಾರಿ ಪ್ರಕಾಶ್ ರೈ, ಉಪಾಧ್ಯಕ್ಷ ಹರೀಶ್ ಪಿ. ಪಟ್ಲಡ್ಕ, ಗಿರೀಶ್ ಡಿ. ನೆಲ್ಯಾಡಿ, ಗುರಿಕಾರ ವಿಶ್ವನಾಥ ಪಟ್ಲಡ್ಕ, ಜೊತೆಗೆ ಕಾರ್ಯದರ್ಶಿ ಮಕರಂದ ಹಾಗೂ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವಕೃಪೆಗೆ ಪಾತ್ರವಾಗುವಂತೆ ಕೋರಿದ್ದಾರೆ.

Leave a Reply

You May Have Missed

error: Content is protected !!