ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದ 10ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಸಮಿತಿ ರಚನೆ

ನೆಲ್ಯಾಡಿ: ಕುತ್ರಾಡಿ ಹಾರ್ಪಳದ ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಏ.22 ಮತ್ತು 23ರಂದು ನಡೆಯಲಿರುವ 10ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಸಮಿತಿಯನ್ನು ಮಾ.6ರಂದು ದೇವಸ್ಥಾನದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ರಚಿಸಲಾಯಿತು.

ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ನಿತೇಶ್ ಪುಳಿತ್ತಡಿ ಹಾಗೂ ಕಾರ್ಯದರ್ಶಿಯಾಗಿ ದಿನೇಶ್ ನಾಯ್ಕ್ ಪಡುಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸೇಸಪ್ಪ ಪಡಿಪಂಡ ಮತ್ತು ಗುಡ್ಡಪ್ಪ ಗೌಡ ಪೊಣ್ಣೆತ್ತಿಮಾರು ತಿಮರಡ್ಡ ಅವರನ್ನು ಆಯ್ಕೆ ಮಾಡಲಾಗಿದ್ದು, ಜತೆ ಕಾರ್ಯದರ್ಶಿಯಾಗಿ ಸಂದೀಪ್ ರಾಮನಗರ ನೇಮಕಗೊಂಡರು.

ಸದಸ್ಯರಾಗಿ ಚಂದ್ರಶೇಖರ್ ಡೆಂಜ, ಸತೀಶ್ಚಂದ್ರ ಆತ್ರಿಜಾಲು, ಶೀನಪ್ಪ ಗಾಣಂತಿ, ನಾಗೇಶ್ ಗಡಿಕಲ್ಲು, ನಾರಾಯಣ ಮರ್ವೋಡಿ, ದೀಪಕ್ ಬಟ್ಟಿಗದ್ದೆ, ಬಾಲಕೃಷ್ಣ ಮಕ್ಕಿಗದ್ದೆ, ಶಿವಪ್ರಸಾದ್ ಮೂಲೆಮನೆ, ಮನೋಜ್, ಜನಾರ್ದನ ಹೊಸಮನೆ, ಪುರಂದರ ಗೌಡ ಪಟ್ಟೆಮಜಲು, ಶಂಕರ್ ಪಡುಬೆಟ್ಟು, ಅಣ್ಣಿ ಮೇಲಿನಮಕ್ಕಿ, ಸುಶಾಂತ್ ರಾಮನಗರ, ವಿಶ್ವನಾಥ ಗೌಡ ಹುಣ್ಸೆಬೆಟ್ಟು, ದೇಜಪ್ಪ ಗೌಡ ಹೊಸಮನೆ ಹಾಗೂ ಗಿರೀಶ್ ಪಡುಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸುಂದರ ಗೌಡ ಅತ್ರಿಜಾಲು, ಕಾರ್ಯದರ್ಶಿ ಸುರೇಶ್ ಪಡಿಪಂಡ, ಕೋಶಾಧಿಕಾರಿ ಸೀತರಾಮ ಗೌಡ ಕಾನಮನೆ, ಅರ್ಚಕರಾದ ಶ್ರೀಧರ್ ನೂಜಿನ್ನಾಯ ಸೇರಿದಂತೆ ಸ್ಥಳೀಯ ಪ್ರಮುಖರಾದ ಬಾಲಕೃಷ್ಣ ಗೌಡ ಹಾರ್ಪಳ, ರವಿಪ್ರಸಾದ್ ಶೆಟ್ಟಿ ರಾಮನಗರ, ಚಂದ್ರಶೇಖರ್ ರೈ ರಾಮನಗರ, ಅನಿಲ್ ರೈ ಹಾರ್ಪಳ, ಯಾದವ ಶೆಟ್ಟಿ ರಾಮನಗರ, ರವಿಚಂದ್ರ ಗೌಡ ಅತ್ರಿಜಾಲು, ಧನಂಜಯ ಗೌಡ ಹೊಸವೊಕ್ಲು, ರುಕ್ಮಯ ಗೌಡ ದಗ್ಗೋಡಿ, ಗಣಪಯ್ಯ ಗೌಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!