ಕಡಬ: ತಲೆನೋವಿಗೆ ಔಷಧಿ ಸೇವಿಸಿದ 10 ವರ್ಷದ ಬಾಲಕ ಸಾವು

ಕಡಬ: ತಲೆನೋವಿಗೆ ಔಷಧಿ ಸೇವಿಸಿದ 10 ವರ್ಷದ ಬಾಲಕ ಸಾವು

ಕಡಬ: ತಲೆನೋವಿಗೆ ಔಷಧಿ ಸೇವಿಸಿದ 10 ವರ್ಷದ ಬಾಲಕ ಸಾವು

ಕಡಬ: ತಲೆನೋವಿಗೆ ಔಷಧಿ ಸೇವಿಸಿದ 10 ವರ್ಷದ ಬಾಲಕ ಸಾವು

ಕಡಬ: ತಲೆನೋವಿಗೆಂದು ಮನೆಯಲ್ಲಿ ಇದ್ದ ಔಷಧಿಯನ್ನು ಸೇವಿಸಿ ಚಿರಾಗ್.ಎಸ್(10.ವ) ಬಾಲಕ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ರಾಮಕುಂಜದಲ್ಲಿ ನಡೆದಿದೆ.

ಪ್ರಕರಣದ ಪಿರ್ಯಾದಿದಾರರಾದ ಕಡಬ ರಾಮಕುಂಜ ನಿವಾಸಿ ಸಂಜೀವ ಪೂಜಾರಿ(50) ಅವರ ದೂರಿನಂತೆ, ಮಗನಿಗೆ ಪದೇಪದೇ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಇದೇ ಹಿನ್ನೆಲೆ ಮಾ.18ರಂದು ಸಂಜೆ ತಲೆನೋವಿನಿಂದ ಬಳಲುತ್ತಿದ್ದ ಬಾಲಕನು ಮನೆಯಲ್ಲಿ ಇದ್ದ ಔಷಧಿಯನ್ನು ಸೇವಿಸಿದ್ದಾನೆ. ಇದರಿಂದಾಗಿ ಆತ ಮನೆಯಲ್ಲಿ ಅಸ್ವಸ್ಥಗೊಂಡು. ತಕ್ಷಣ ಮನೆಗೆ ಆಗಮಿಸಿದ ತಂದೆ ಸಂಜೀವ ಪೂಜಾರಿ ಅವರು ಮಗನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಸಾಗಿಸಿದ್ದಾರೆ. ಆದರೆ ಅಲ್ಲಿನ ವೈದ್ಯಾಧಿಕಾರಿಗಳು ಪರೀಕ್ಷಿಸಿ ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

Leave a Reply

You May Have Missed

error: Content is protected !!