ಕೊಕ್ಕಡ: ಬಾರ್‌ನಲ್ಲಿ ಗಲಾಟೆ- ನಾಲ್ವರ ವಿರುದ್ಧ ಪ್ರಕರಣ ದಾಖಲು

ಕೊಕ್ಕಡ: ಬಾರ್‌ನಲ್ಲಿ ಗಲಾಟೆ- ನಾಲ್ವರ ವಿರುದ್ಧ ಪ್ರಕರಣ ದಾಖಲು

ಕೊಕ್ಕಡ: ಬಾರ್‌ನಲ್ಲಿ ಗಲಾಟೆ- ನಾಲ್ವರ ವಿರುದ್ಧ ಪ್ರಕರಣ ದಾಖಲು

 

ಕೊಕ್ಕಡ: ಕೊಕ್ಕಡದ ಬಾರ್‌ವೊಂದರಲ್ಲಿ ಗಲಾಟೆ ನಡೆದಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ.29ರಂದು ರಾತ್ರಿ ಕೊಕ್ಕಡ ನಿವಾಸಿ ಅಕ್ಷಯ್ (31) ಎಂಬವರು ಕೊಕ್ಕಡ ಬಾರ್ ಆಂಡ್ ರೆಸ್ಟೋರೆಂಟ್‌ವೊಂದರಲ್ಲಿ ಮದ್ಯ ಸೇವಿಸಲು ಕುಳಿತಿರುವ ಸಮಯ ಯತೀಶ್ ಎಂಬಾತ ಬಂದು ಅಕ್ಷಯ್ ಜೊತೆಗೆ ಹಣಕಾಸಿನ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿರುವುದಾಗಿ ಆಪಾದಿಸಲಾಗಿದೆ. ಯತೀಶ್, ಧನುಷ್ ಭಂಡಾರಿ, ಶರತ್ ಭಂಡಾರಿ ಮತ್ತು ಪ್ರವೀಣ್ ರವರು ಹಲ್ಲೆ ನಡೆಸಿ, ಅವಾಚ್ಯ ಶಬ್ದದಿಂದ ಬೈದು ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಅಕ್ಷಯ್ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

You May Have Missed

error: Content is protected !!