ಕೊಣಾಲು: ಕುಳತ್ತಿನಾಲ್ ನಿವಾಸಿ ನಿವೃತ್ತ ಸೈನಿಕ ಡೊಮಿನಿಕ್(ಸಾಬು) ಇವರು ಅಸೌಖ್ಯದಿಂದ ನಿಧನ

ಕೊಣಾಲು: ಕುಳತ್ತಿನಾಲ್ ನಿವಾಸಿ ನಿವೃತ್ತ ಸೈನಿಕ ಡೊಮಿನಿಕ್(ಸಾಬು) ಇವರು ಅಸೌಖ್ಯದಿಂದ ನಿಧನ

ನೇಸರ ಮಾ.20: ಕಡಬ ತಾಲೂಕು ಕೊಣಾಲು ಗ್ರಾಮ ಕುಳತ್ತಿನಾಲ್ ನಿವಾಸಿ ಡೊಮಿನಿಕ್(ಸಾಬು) ಇವರು ಅಸೌಖ್ಯದಿಂದ ಇಂದು ಮಾ.20 ಬೆಳಗ್ಗೆ ನಿಧನರಾದರು.
ಇವರು ಭಾರತೀಯ ಸೇನೆಯಲ್ಲಿ AOC ವಿಭಾಗದಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರ ಪತ್ನಿ ಶ್ರೀಮತಿ ಲಿಸ್ಸಿ ಡೊಮಿನಿಕ್ ಸಹ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುತ್ತಾರೆ. ಇವರು ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಇವರ ಅಂತ್ಯ ಸಂಸ್ಕಾರವು ಆರ್ಲ ಸೈಂಟ್ ಮೇರಿಸ್ ಚರ್ಚ್ ನಲ್ಲಿ ಭಾರತೀಯ ಸೇನಾ ಸಿಬ್ಬಂದಿಗಳು, ಚರ್ಚಿನ ಗಣ್ಯರು,ನೆಲ್ಯಾಡಿ ಹಾಗೂ ಕೊಣಾಲಿನ ಸಮಸ್ತ ಜನರ ಕೂಡುವಿಕೆಯೊಂದಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

Previous post

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜ್ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ

Next post

ಅರ್ಚನಾ.ಎಸ್.ಸಂಪ್ಯಾಡಿ ಇವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ),ಕರ್ನಾಟಕ ವತಿಯಿಂದ “ಅಭಿನಂದನಾ ಪತ್ರ “

Leave a Reply

You May Have Missed

error: Content is protected !!