ಇಚ್ಲಂಪಾಡಿ-ಬೀಡು: ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ಹಾಗೂ ನೇಮೋತ್ಸವ

ಇಚ್ಲಂಪಾಡಿ

ಇಚ್ಲಂಪಾಡಿ-ಬೀಡು: ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ಹಾಗೂ ನೇಮೋತ್ಸವ

 

ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ಹಾಗೂ ನೇಮೋತ್ಸವ


ಇಚ್ಲಂಪಾಡಿ: ತುಳುನಾಡಿನ ಭಕ್ತಿ ಮತ್ತು ಸಂಪ್ರದಾಯದ ಪ್ರತೀಕವಾಗಿರುವ ಇಚ್ಲಂಪಾಡಿ-ಬೀಡುವಿನ ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ಮತ್ತು ನೇಮೋತ್ಸವವು ಏಳೆದ ಏಪ್ರಿಲ್ 9ರಿಂದ ಆರಂಭಗೊಂಡಿದ್ದು, ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಜರುಗುತ್ತಿದೆ.

ಪರಾಭವ ನಾಮ ಸಂವತ್ಸರದ ಮೀನ ಮಾಸ 26 ರಿಂದ ಮೇಷ ಮಾಸ 3ರ ಅವಧಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ .ಉತ್ಸವದ ಆರಂಭದ ಅಂಗವಾಗಿ ಏಪ್ರಿಲ್ 09 ರಂದು ಕುಂತೂರು ಗ್ರಾಮದ ಮಣಿಕ್ಕಳದ ಶ್ರೀ ಉಳ್ಳಾಕ್ಲು ಕ್ಷೇತ್ರದಿಂದ ಭಕ್ತಿಯಿಂದ ‘ಗೊನೆ ತರುವ’ ಕಾರ್ಯಕ್ರಮ ನಡೆಯಿತು. ಮರುದಿನ, ಅಂದರೆ ಏಪ್ರಿಲ್ 10 ರಂದು ಬೆಳಿಗ್ಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೊನೆ ಮುಹೂರ್ತವು ಶಾಸ್ತ್ರೋಕ್ತವಾಗಿ ನೆರವೇರಿದೆ.

ಮುಂದಿನ ಪ್ರಮುಖ ಕಾರ್ಯಕ್ರಮಗಳ ವಿವರ:
ಜಾತ್ರೋತ್ಸವದ ಮುಂದುವರಿದ ಭಾಗವಾಗಿ ಮುಂಬರುವ ದಿನಗಳಲ್ಲಿ ಈ ಕೆಳಗಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಏಪ್ರಿಲ್ 14 (ಮಂಗಳವಾರ): ಬೆಳಿಗ್ಗೆ 8:30 ರಿಂದ ಉಳ್ಳಾಕ್ಲು ಮಾಡದಲ್ಲಿ ದೇವತಾ ಪ್ರಾರ್ಥನೆ, ಶುದ್ಧಿ ಕಲಶ ಮತ್ತು ಗಣಪತಿ ಹೋಮ ನಡೆಯಲಿದೆ.ಸಾಯಂಕಾಲ 7:30ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಬಳಿಕ ಭಂಡಾರ ತೆಗೆದು ಕುದುರೆಮುಖ ಮತ್ತು ಉದ್ರಾಂಡಿ ದೈವಗಳ ನೇಮ ಜರುಗಲಿದೆ.

ಏಪ್ರಿಲ್ 15 (ಬುಧವಾರ): ಬೆಳಿಗ್ಗೆ 6:30ಕ್ಕೆ ಸಾಂಪ್ರದಾಯಿಕ ‘ಬಿಸು ಕಾಣಿಕೆ’ ಅರ್ಪಿಸುವ ಕಾರ್ಯಕ್ರಮವಿದೆ.

ಏಪ್ರಿಲ್ 16 (ಗುರುವಾರ): ಮಧ್ಯಾಹ್ನ 1:00ಕ್ಕೆ ಶ್ರೀ ಉಳ್ಳಾಕ್ಲು ದೈವಕ್ಕೆ ಎಣ್ಣೆ ವೀಳ್ಯ ಸಮರ್ಪಣೆ.ಅಪರಾಹ್ನ 3:00ಕ್ಕೆ ವೈಭವದ ಶ್ರೀ ಉಳ್ಳಾಕ್ಲು ದೈವದ ನೇಮೋತ್ಸವ.

ಏಪ್ರಿಲ್ 17 (ಶುಕ್ರವಾರ): ಮಧ್ಯಾಹ್ನ 1:00ಕ್ಕೆ ಶ್ರೀ ಹಳ್ಳತ್ತಾಯ ದೈವಕ್ಕೆ ಎಣ್ಣೆ ವೀಳ್ಯ ಅರ್ಪಣೆ.ಅಪರಾಹ್ನ 3:00ಕ್ಕೆ ಶ್ರೀ ಹಳ್ಳತ್ತಾಯ, ಪನ್ಯಾಡಿತ್ತಾಯ ಮತ್ತು ಪೊಟ್ಟ ದೈವಗಳ ನೇಮೋತ್ಸವದೊಂದಿಗೆ ಈ ವರ್ಷದ ಜಾತ್ರೋತ್ಸವವು ಸಂಪನ್ನಗೊಳ್ಳಲಿದೆ.

 

Leave a Reply

You May Have Missed

error: Content is protected !!