ನೆಲ್ಯಾಡಿ: ರಸ್ತೆ ಬದಿ ನಿಂತಿದ್ದ ಲಾರಿ ಚಾಲಕನಿಗೆ ಕಾರು ಡಿಕ್ಕಿ: ಗಂಭೀರ ಗಾಯ

ನೆಲ್ಯಾಡಿ: ರಸ್ತೆ ಬದಿ ನಿಂತಿದ್ದ ಲಾರಿ ಚಾಲಕನಿಗೆ ಕಾರು ಡಿಕ್ಕಿ: ಗಂಭೀರ ಗಾಯ

ನೆಲ್ಯಾಡಿ: ರಸ್ತೆ ಬದಿ ನಿಂತಿದ್ದ ಲಾರಿ ಚಾಲಕನಿಗೆ ಕಾರು ಡಿಕ್ಕಿ: ಗಂಭೀರ ಗಾಯ

ನೆಲ್ಯಾಡಿ: ರಸ್ತೆ ಬದಿ ನಿಂತಿದ್ದ ಲಾರಿ ಚಾಲಕನಿಗೆ ಕಾರು ಡಿಕ್ಕಿ: ಗಂಭೀರ ಗಾಯ

ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಲಾವತಡ್ಕ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಗಾಂಧಿನಗರದ ಸೀಬಿನಕೆರೆ ನಿವಾಸಿ ಶೈಕ್ ಬುಡನ್ (53) ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಕಬ್ಬಿಣದ ರಾಡುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಲಾವತಡ್ಕದಲ್ಲಿ ನಿಲ್ಲಿಸಿ, ಚಾಲಕ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದೇ ವೇಳೆ ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ಕಾರನ್ನು ಮಂಗಳೂರು ನಿವಾಸಿ ಉದ್ಯಮಿ ರಂಜನ್ (36) ಚಲಾಯಿಸುತ್ತಿದ್ದು, ನಿಯಂತ್ರಣ ತಪ್ಪಿದ ಕಾರು ಲಾರಿ ಚಾಲಕನಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯ ತೀವ್ರತೆಯಿಂದ ಶೈಕ್ ಬುಡನ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯಲ್ಲಿ ಇಬ್ಬರು ಚಾಲಕರಿದ್ದರೂ, ಈ ಘಟನೆಯಲ್ಲಿ ಮತ್ತೊಬ್ಬರಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

You May Have Missed

error: Content is protected !!