ಉಪ್ಪಿನಂಗಡಿಯಲ್ಲಿ ಭೀಕರ ದುರಂತ: ರಸ್ತೆ ಕಾಮಗಾರಿ ವೇಳೆ ರೋಡ್ ರೋಲರ್ ಹರಿದು ಕಾರ್ಮಿಕ ಸಾವು

ಉಪ್ಪಿನಂಗಡಿ: ರಸ್ತೆ ಕಾಮಗಾರಿ ಸಂದರ್ಭ ರೋಡ್ ರೋಲರ್‌ನ ಅಡಿಗೆ ಬಿದ್ದು ವ್ಯಕ್ತಿಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮೇ 9ರಂದು ಉಪ್ಪಿನಂಗಡಿಯ ಗಾಂಧಿಪಾರ್ಕ್ ಸಮೀಪ ಸಂಭವಿಸಿದೆ.

ಉಪ್ಪಿನಂಗಡಿಯಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಂಗವಾಗಿ ಸರ್ವೀಸ್ ರಸ್ತೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ವ್ಯಕ್ತಿಯೋರ್ವ ಮಲಗಿದ್ದ ಎನ್ನಲಾಗಿದೆ. ಕಾಮಗಾರಿಯಲ್ಲಿ ತೊಡಗಿದ್ದ ರೋಡ್ ರೋಲರ್ ಚಾಲಕನ ಗಮನಕ್ಕೆ ಬಾರದೆ ಆತನ ಮೇಲೆಯೇ ರೋಡ್ ರೋಲರ್ ಚಲಿಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಮೃತನ ದೇಹ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಮೃತ ವ್ಯಕ್ತಿ ಉತ್ತರ ಭಾರತದ ಮೂಲದ ಕಾರ್ಮಿಕನಾಗಿರಬಹುದು ಎಂದು ಶಂಕಿಸಲಾಗಿದ್ದು, ಆತನ ಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

You May Have Missed

error: Content is protected !!