ಕಡಬ: ನಾಳೆ(ಜೂ.8) ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಧನ ಸಹಾಯ ಹಾಗೂ ವಿತರಣೆ

ನಾಳೆ(ಜೂ.8) ಕಡಬದಲ್ಲಿ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಧನ ಸಹಾಯ ಹಾಗೂ ವಿತರಣೆ

ಕಡಬ: ನಾಳೆ(ಜೂ.8) ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಧನ ಸಹಾಯ ಹಾಗೂ ವಿತರಣೆ

 

ನಾಳೆ(ಜೂ.8) ಕಡಬದಲ್ಲಿ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಧನ ಸಹಾಯ ಹಾಗೂ ವಿತರಣೆ

ಕಡಬ: ಕರ್ನಾಟಕ ಕಾರನಿರತ ಪತ್ರಕರ್ತರ ಸಂಘದ ಕಡಬ ಘಟಕದ ಆಶ್ರಯದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಶ್ರವಣ ಉಚಿತ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಧನ ಸಹಾಯ ಹಾಗೂ ವಿತರಣೆ ಕಾರ್ಯಕ್ರಮ ಜೂ.8ರಂದು ಕಡಬ ಮಹಾಗಣಪತಿ ರಸ್ತೆಯ ಸೌರಭ ಟವರ್ಸ್ ನಲ್ಲಿರುವ ಪ್ರೆಸ್ ಕ್ಲಬ್‌ನಲ್ಲಿ ನಡೆಯಲಿದೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಶಿಬಿರ ನಡೆಯಲಿದ್ದು, ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯನಾಗರಿಕರು ಹಾಗೂ ಸಾರ್ವಜನಿಕರಿಗೆ ತಜ್ಞರಿಂದ ಉಚಿತ ತಪಾಸಣೆ ನಡೆಯಲಿದೆ. ಅಗತ್ಯವಿರುವವರಿಗೆ ಶ್ರವಣ ಯಂತ್ರ ಖರೀದಿಗೆ ಶೇ.40 ರಷ್ಟು ಧನ ಸಹಾಯ ನೀಡಲಾಗುತ್ತದೆ.

ಶಿಬಿರದಲ್ಲಿ ಭಾಗವಹಿಸುವವರು ಕಿವಿಯ ಹಿಂದಿನ ವೈದ್ಯಕೀಯ ವರದಿ ಇದ್ದಲ್ಲಿ ತರಬೇಕು. ಶ್ರವಣ ಯಂತ್ರ ಬಳಕೆದಾರರು ತಮ್ಮ ಹಳೆಯ ಯಂತ್ರವನ್ನು ಪರಿಶೀಲನೆಗಾಗಿ ತರಬೇಕು. ಶ್ರವಣ ಸಮಸ್ಯೆ ಅನುಭವಿಸುತ್ತಿರುವವರು ಶಿಬಿರದ ಯೋಜನ ಪಡೆದುಕೊಳ್ಳಬಹುದಾಗಿದೆ. 30 ಜನರಿಗೆ ಮಾತ್ರ ಈ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದ್ದು ನೋಂದಣಿ ಕಡ್ಡಾಯವಾಗಿದೆ ಎಂದು ಕಡಬ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

 

Leave a Reply

You May Have Missed

error: Content is protected !!