ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲೀಜನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲೀಜನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲೀಜನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

 

ಸುಬ್ರಹ್ಮಣ್ಯ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲೀಜನ್‌ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಧ್ಯಕ್ಷರಾಗಿ ಸೀನಿಯರ್ ಮಾಧವ ದೇವರಗದ್ದೆ ಆಯ್ಕೆಯಾಗಿದ್ದಾರೆ.

ನೂತನ ಕಾರ್ಯಕಾರಿ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೀನಿಯರ್ ಮೋಹನ್ ದಾಸ್ ರೈ, ಕೋಶಾಧಿಕಾರಿಯಾಗಿ ಸೀನಿಯರ್ ಗೋಪಾಲ ಎಣ್ಣೆಮಜಲ್, ನಿಕಟಪೂರ್ವ ಅಧ್ಯಕ್ಷರಾಗಿ ಸೀನಿಯರ್ ವೆಂಕಟೇಶ ಎಚ್.ಎಲ್., ಸ್ಥಾಪಕ ಅಧ್ಯಕ್ಷರಾಗಿ ವಿಶ್ವನಾಥ ನಡುತೋಟ ಹಾಗೂ ಪೂರ್ವಾಧ್ಯಕ್ಷರಾಗಿ ಡಾ.ರವಿ ಕಕ್ಕೆಪದವು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸೀನಿಯರ್ ಶೇಷಪ್ಪ ಗೌಡ ಆಯ್ಕೆಯಾಗಿದ್ದು, ನಿರ್ದೇಶಕರು ಹಾಗೂ ಸದಸ್ಯರಾಗಿ ಸೀನಿಯರ್ ಚಂದ್ರಶೇಖರ ನಾಯರ್, ಗೋಪಾಲ ಎಣ್ಣೆಮಜಲ್, ಪ್ರಕಾಶ್ ಕಟ್ಟೆಮನೆ, ಮೋನಪ್ಪ ಡಿ., ಪ್ರಭಾಕರ ಪಡ್ರೆ, ಲೋಕೇಶ್ ಬಿ.ಎಂ., ಅಶೋಕ್ ಮೂಲೆಮಜಲ್, ರೋಹಿತ್ ಬಿ.ಬಿ., ಮೋಹನ್ದಾಸ್ ರೈ, ಪ್ರಶಾಂತ್ ಕೋಡಿಬೈಲ್, ಲೀಲಾ ವಿಶ್ವನಾಥ್, ಜಾನಕಿ ವೆಂಕಟೇಶ್ ಹಾಗೂ ಗೀತಾ ರವಿ ಕಕ್ಕೆಪದವು ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳನ್ನು ಸಂಘಟನೆಯ ಸದಸ್ಯರು ಅಭಿನಂದಿಸಿದ್ದು, ಮುಂದಿನ ಅವಧಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳು, ಸೇವಾ ಚಟುವಟಿಕೆಗಳು ಹಾಗೂ ಸಂಘಟನೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Leave a Reply

You May Have Missed

error: Content is protected !!