ಪುಟಾಣಿ ಪ್ರತಿಭೆ ಅದ್ವಿಕಾ ಬಾಕಿಲ ಹಾಡಿ ಅಭಿನಯಿಸಿದ “ಆದಿಮಾಯೆ” ಶರವೂರು ಶ್ರೀ ದುಗೆ೯ಯ ಸ್ತುತಿ..ತುಳು ಭಕ್ತಿ ಸುಗಿಪು ವೀಡಿಯೋ ಆಲ್ಬಮ್ ಬಿಡುಗಡೆ

ಪುಟಾಣಿ ಪ್ರತಿಭೆ ಅದ್ವಿಕಾ ಬಾಕಿಲ ಹಾಡಿ ಅಭಿನಯಿಸಿದ “ಆದಿಮಾಯೆ” ಶರವೂರು ಶ್ರೀ ದುಗೆ೯ಯ ಸ್ತುತಿ..ತುಳು ಭಕ್ತಿ ಸುಗಿಪು ವೀಡಿಯೋ ಆಲ್ಬಮ್ ಬಿಡುಗಡೆ

ನೇಸರ ಮಾ.23: ಶರವೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಪುಟಾಣಿ ಪ್ರತಿಭೆ ಅದ್ವಿಕಾ ಬಾಕಿಲ ಅಭಿನಯಿಸಿ ಹಾಡಿರುವ “ಆದಿಮಾಯೆ” ಇರೆಗ್ ಎನ್ನ ಭಕ್ತಿದ ಕಾಣಿಕೆ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಿನ ತುಳು ಭಕ್ತಿ ಸುಗಿಪು ವೀಡಿಯೋ ಆಲ್ಬಮ್ ನ್ನು ಬಿಡುಗಡೆಗೊಳಿಸಲಾಯಿತು.
ಅದ್ವಿಕಾ ಬಾಕಿಲ ಪ್ರಸ್ತುತ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯು.ಕೆ.ಜಿ ಓದುತ್ತಿರುವ ಈಕೆ ಈಗಾಗಲೇ ಹಲವು ಕಡೆಗಳಲ್ಲಿ ಕೃಷ್ಣ ವೇಷ ಸ್ಪಧೆ೯ಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡಿದಿರುವುದು ಮಾತ್ರವಲ್ಲದೆ, ದೊಡ್ಡ ವೇದಿಕೆಯಲ್ಲಿಯೂ ತನ್ನ ಮುದ್ದಾದ ಹಾವಭಾವ – ಹೆಜ್ಜೆಗಳಿಂದ ನೃತ್ಯಪ್ರದಶ೯ನಗಳನ್ನು ನೀಡಿ ಮೆಚ್ಚುಗೆಯನ್ನು ಪಡೆದಿರುತ್ತಾಳೆ. Adwika bakila ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಈಕೆಯ ನೃತ್ಯದ 15ಕ್ಕೂ ಹೆಚ್ಚಿನ ವೀಡಿಯೋಗಳು ಕಾಣಸಿಗುತ್ತದೆ. ಈಕೆ ಗೋಳಿತೊಟ್ಟು ಶಾಂತಿನಗರ ಸರಕಾರಿ ಶಾಲೆಯ ಶಿಕ್ಷಕ ಪ್ರದೀಪ್ ಬಾಕಿಲ ಹಾಗೂ ಪೆರಾಬೆ ಸರಕಾರಿ ಶಾಲೆಯ ಶಿಕ್ಷಕಿ ಹೇಮಲತಾ ಪ್ರದೀಪ್ ಇವರ ಪುತ್ರಿ

Previous post

ನೆಲ್ಯಾಡಿ: ಬೆಥನಿ ಕಾಲೇಜಿನ ಪೂರ್ವಪ್ರಾಥಮಿಕ ಮಕ್ಕಳ ಸಂಗಮ ಹಾಗೂ ಪದವಿ ಪ್ರಧಾನ ಸಮಾರಂಭ

Next post

ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ನೇಮೋತ್ಸವದ ವೇಳೆ ಆಕಸ್ಮಿಕವಾಗಿ ಕೈಯಲ್ಲೇ ಸಿಡಿದ ಸಿಡಿಮದ್ದು,ಸೋಮಶೇಖರ್ ನಡುಗುಡ್ಡೆ ಪ್ರಾಣಾಪಾಯದಿಂದ ಪಾರು

Leave a Reply

You May Have Missed

error: Content is protected !!