ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಕಾಲೇಜು ಸಂಸತ್ ಚುನಾವಣೆ

ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಕಾಲೇಜು ಸಂಸತ್ ಚುನಾವಣೆ

ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಕಾಲೇಜು ಸಂಸತ್ ಚುನಾವಣೆ

 

ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಕಾಲೇಜು ಸಂಸತ್ ಚುನಾವಣೆ

ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ 2026-27ನೇ ಸಾಲಿನ ಕಾಲೇಜು ಸಂಸತ್ತಿನ ಚುನಾವಣೆಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮತದಾರರ ಚೀಟಿಯ ಮೂಲಕ ಗೌಪ್ಯ ಮತದಾನ ಮಾಡಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.

ಚುನಾವಣೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪನ್ನಗಿ ಕೆ.ವಿ. ಕಾಲೇಜು ಸಂಸತ್ತಿನ ಅಧ್ಯಕ್ಷೆಯಾಗಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮದ್ವಿತ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಕನ್ನಡ ಮಾಧ್ಯಮ ಪ್ರೌಢಶಾಲೆಯಿಂದ 10ನೇ ತರಗತಿಯ ವಿದ್ಯಾರ್ಥಿನಿ ಫಾತಿಮತ್ ರಿಫಾನ ಉಪಾಧ್ಯಕ್ಷೆಯಾಗಿ ಹಾಗೂ ಯಶವಂತ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆಂಗ್ಲ ಮಾಧ್ಯಮ ಪ್ರೌಢಶಾಲೆಯಿಂದ 10ನೇ ತರಗತಿಯ ವಿದ್ಯಾರ್ಥಿ ಅಬಿನ್ ಸೈಜು ಉಪಾಧ್ಯಕ್ಷರಾಗಿ ಮತ್ತು ವಿದ್ಯಾರ್ಥಿನಿ ವರ್ಷಿಣಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಅಧಿಕಾರಿಗಳಾಗಿ ಪಿಯು ವಿಭಾಗದ ಮಧು ಎ.ಜೆ., ಕನ್ನಡ ಮಾಧ್ಯಮ ವಿಭಾಗದ ವರ್ಗೀಸ್ ಫ್ರಾನ್ಸಿಸ್ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ರಾಬಿಯಾ ಅವರು ಕಾರ್ಯನಿರ್ವಹಿಸಿದರು.

ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳನ್ನು ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್, ಪ್ರಾಂಶುಪಾಲ ಎಲಿಯಾಸ್ ಎಂ.ಕೆ. ಹಾಗೂ ಮುಖ್ಯಗುರು ಥೋಮಸ್ ಎಂ.ಐ. ಅಭಿನಂದಿಸಿ ಶುಭ ಹಾರೈಸಿದರು.

 

Previous post

ನೆಲ್ಯಾಡಿ: ಬಿಲ್ಲವ ಗ್ರಾಮ ಸಮಿತಿ ಮಹಾಸಭೆ: ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಪ್ರತಿಭಾಪುರಸ್ಕಾರ

Next post

ಗುರುವಾಯನಕೆರೆ: ಭೀಕರ ರಸ್ತೆ ಅಪಘಾತ: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ, ಸ್ಥಳದಲ್ಲೇ ಸಾವು

Leave a Reply

You May Have Missed

error: Content is protected !!