ಕೌಕ್ರಾಡಿ: ಅಗ್ನಿವೀರ್‌ಗೆ ಆಯ್ಕೆಯಾದ ಭರತ್ ಗೌಡ ಮುಂಡ್ರೇಲ್‌ಗೆ ಕಾವು ಯುವ ಕೇಸರಿ ಸಂಘಟನೆಯ ವತಿಯಿಂದ ಸನ್ಮಾನ

ಕೌಕ್ರಾಡಿ: ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆಯಡಿ ಭಾರತೀಯ ಸಶಸ್ತ್ರ ಪಡೆಗೆ ಆಯ್ಕೆಯಾಗಿ ತರಬೇತಿಗೆ ತೆರಳುತ್ತಿರುವ ಯುವ ಕೇಸರಿ ಕಾವು-ಕೌಕ್ರಾಡಿ ಸಂಘಟನೆಯ ಸದಸ್ಯ ಭರತ್ ಗೌಡ ಮುಂಡ್ರೇಲ್ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಲಾಯಿತು.

ಭರತ್ ಗೌಡ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ದೇಶಸೇವೆಯಂತಹ ಶ್ರೇಷ್ಠ ಕಾರ್ಯಕ್ಕೆ ಆಯ್ಕೆಯಾಗಿರುವುದು ಯುವ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದ್ದು, ಅವರ ಸೇವಾ ಜೀವನ ಯಶಸ್ವಿಯಾಗಲಿ ಎಂದು ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಕಾವು ಶ್ರೀ ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಶುಭ ಹಾರೈಸಿದರು. ಯುವ ಕೇಸರಿ ಕಾವು-ಕೌಕ್ರಾಡಿ ಅಧ್ಯಕ್ಷ ರಘು ಗೌಡ ಬಾರಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಭರತ್ ಗೌಡ ಅವರ ದೇಶಸೇವೆಯ ಸಂಕಲ್ಪಕ್ಕೆ ಅಭಿನಂದನೆ ಸಲ್ಲಿಸಿದರು.

Previous post

ನೆಲ್ಯಾಡಿ: ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ: ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾವಂತರಿಗೆ ಸನ್ಮಾನ

Next post

ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸ್ಥಾಪನಾ ದಿನಾಚರಣೆ: ₹7 ಲಕ್ಷ ವೆಚ್ಚದ ಅತ್ಯಾಧುನಿಕ ಗಣಿತ ಪ್ರಯೋಗಾಲಯ ಉದ್ಘಾಟನೆ

Leave a Reply

You May Have Missed

error: Content is protected !!