ಬ್ಯಾಟರಿ ಕಳವು ಪ್ರಕರಣ ಭೇದಿಸಿದ ಪೊಲೀಸರು; ಐದು ಬ್ಯಾಟರಿಗಳ ವಶ

ಬ್ಯಾಟರಿ ಕಳವು ಪ್ರಕರಣ ಭೇದಿಸಿದ ಪೊಲೀಸರು; ಐದು ಬ್ಯಾಟರಿಗಳ ವಶ

ಬ್ಯಾಟರಿ ಕಳವು ಪ್ರಕರಣ ಭೇದಿಸಿದ ಪೊಲೀಸರು; ಐದು ಬ್ಯಾಟರಿಗಳ ವಶ

 

ಬ್ಯಾಟರಿ ಕಳವು ಪ್ರಕರಣ ಭೇದಿಸಿದ ಪೊಲೀಸರು; ಐದು ಬ್ಯಾಟರಿಗಳ ವಶ

ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬ್ಯಾಟರಿ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕೇರಳದ ಕಾಸರಗೋಡು ನಿವಾಸಿ ಅಬ್ದುಲ್ ಮಜಿದ್ (33) ಎಂಬಾತನನ್ನು ಬಂಧಿಸಿ ಕಳವುಗೈದ ಐದು ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮೇ 14, 2026ರಂದು ರಾತ್ರಿ ವೇಳೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಲಾಗಿದ್ದ ಮೂರು ವಾಹನಗಳಿಂದ ಒಟ್ಟು ಐದು ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು.

ತನಿಖೆ ವೇಳೆ ಆರೋಪಿಯಾಗಿ ಗುರುತಿಸಲ್ಪಟ್ಟ ಅಬ್ದುಲ್ ಮಜಿದ್ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯ ಅ.ಕ್ರ. 38/2025, 39/2026, 41/2026, 123/2026 ಹಾಗೂ 126/2026 ಸೇರಿದಂತೆ ಐದು ಪ್ರಕರಣಗಳಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವುದು ತಿಳಿದುಬಂದಿದೆ. ಜುಲೈ 20ರಂದು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಕಳವುಗೈದ ಐದು ಬ್ಯಾಟರಿಗಳನ್ನು ಪತ್ತೆಹಚ್ಚಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆಯನ್ನು ಸುಳ್ಯ ಪೊಲೀಸರು ಮುಂದುವರಿಸಿದ್ದಾರೆ.

CALL NOW 8606485844

 

Leave a Reply

You May Have Missed

error: Content is protected !!