ಇಚ್ಲಂಪಾಡಿ: ಶಾಖೆಯಲ್ಲಿ ಶೀಘ್ರ ಬ್ಯಾಂಕಿಂಗ್ ಸೇವೆ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮಾಲೋಚನಾ ಸಭೆ

ಇಚ್ಲಂಪಾಡಿ: ಶಾಖೆಯಲ್ಲಿ ಶೀಘ್ರ ಬ್ಯಾಂಕಿಂಗ್ ಸೇವೆ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮಾಲೋಚನಾ ಸಭೆ

ಇಚ್ಲಂಪಾಡಿ: ಶಾಖೆಯಲ್ಲಿ ಶೀಘ್ರ ಬ್ಯಾಂಕಿಂಗ್ ಸೇವೆ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮಾಲೋಚನಾ ಸಭೆ

 

ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಇಚ್ಲಂಪಾಡಿ ಶಾಖೆಯನ್ನು ಪೂರ್ಣ ಪ್ರಮಾಣದ ಬ್ಯಾಂಕ್ ಶಾಖೆಯಾಗಿ ಅಭಿವೃದ್ಧಿಪಡಿಸಿ, ಸ್ಥಳೀಯ ಜನರಿಗೆ ಸಮಗ್ರ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಕುರಿತು ಸಮಾಲೋಚನಾ ಸಭೆಯು ಜು.28ರಂದು ಇಚ್ಲಂಪಾಡಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಪ್ರಸ್ತುತ ಇಚ್ಲಂಪಾಡಿ ಶಾಖೆಯಲ್ಲಿ ಪಡಿತರ ವಿತರಣೆ ಸೇವೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರಗಳನ್ನು ಆರಂಭಿಸುವ ಕುರಿತು ಸದಸ್ಯರು ಹಾಗೂ ಆಡಳಿತ ಮಂಡಳಿಯ ನಡುವೆ ಸುದೀರ್ಘ ಚರ್ಚೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಂಘದ ಸದಸ್ಯರೂ ಆಗಿರುವ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್. ಗೌಡ ಇಚ್ಲಂಪಾಡಿ ಅವರು ಇಚ್ಲಂಪಾಡಿ ಭಾಗದ ಜನರಿಗೆ ಸಮರ್ಪಕ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗುತ್ತಿಲ್ಲ. ಈಗಿರುವ ಸಂಘದ ಶಾಖೆಯನ್ನು ಪೂರ್ಣ ಪ್ರಮಾಣದ ಬ್ಯಾಂಕ್ ಶಾಖೆಯಾಗಿ ಪರಿವರ್ತಿಸಿದರೆ ಅದು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸದಸ್ಯರಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಭರವಸೆ ನೀಡಿದರು.

ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ ಮಾತನಾಡಿ ಬ್ಯಾಂಕಿಂಗ್ ಸೇವೆ ಆರಂಭಿಸುವ ಕಾರ್ಯಕ್ಕೆ ತಮ್ಮ ಸಂಘದಿಂದಲೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಂಘದ ನಿರ್ದೇಶಕ ಸರ್ವೋತ್ತಮ ಗೌಡ ಮಾತನಾಡಿ ಇಚ್ಲಂಪಾಡಿ ಶಾಖೆಯನ್ನು ಪೂರ್ಣ ಪ್ರಮಾಣದ ಬ್ಯಾಂಕ್ ಶಾಖೆಯಾಗಿ ಪರಿವರ್ತಿಸುವ ಕುರಿತು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ ಶಾಖೆಯನ್ನು ಯಾವ ಮಾದರಿಯಲ್ಲಿ ಆರಂಭಿಸಬೇಕೆಂಬ ಬಗ್ಗೆ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಮಹಾಸಭೆ ಮುಗಿದ ತಕ್ಷಣವೇ ಇಚ್ಲಂಪಾಡಿಯಲ್ಲಿ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು ಹಾಗೂ ನಿರ್ದೇಶಕರಾದ ಜಿನ್ನಪ್ಪ ಗೌಡ, ಭಾಸ್ಕರ ರೈ, ಶೇಷಮ್ಮ, ಸುಧಾಕರ ಗೌಡ ಮತ್ತು ಹರೀಶ್ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ಮಾಜಿ ಉಪಾಧ್ಯಕ್ಷ ಕುಶಾಲಪ್ಪ ಗೌಡ, ಕೆಎಸ್‌ಆರ್‌ಟಿಸಿ ನಿವೃತ್ತ ಉದ್ಯೋಗಿ ಮೋಹನ್‌ಕುಮಾರ್, ಪ್ರಮುಖರಾದ ಅಬ್ರಹಾಂ, ಮಾಯಿಲಪ್ಪ ಶೆಟ್ಟಿ, ದಿವ್ಯೇಶ್ ಗೌಡ ಕಲ್ಯ, ಸೂಸಮ್ಮ, ಈಪನ್ ಸೇರಿದಂತೆ ಹಲವರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಬಾಲಕೃಷ್ಣ ಬಾಣಜಾಲು ಸ್ವಾಗತಿಸಿದರು. ರವಿಚಂದ್ರ ಹೊಸವಕ್ಲು ಕಾರ್ಯಕ್ರಮ ನಿರೂಪಿಸಿದರು.

 

Previous post

ಎನ್‌ಎಚ್-75 ಚತುಷ್ಪಥ ಕಾಮಗಾರಿಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ: ನೆಲ್ಯಾಡಿಯಲ್ಲಿ ಅಧಿಕಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ತಾಕೀತು

Next post

ವೃದ್ಧೆಯ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Leave a Reply

You May Have Missed

error: Content is protected !!