ಕರಾವಳಿ
# accident #kadaba #shiradi #nellyady #ksrtc, #KOKKADA: ಶಿಬಾಜೆ ಶ್ರೀಧರ ಕೊಲೆ ಪ್ರಕರಣಕ್ಕೆ ಮರು ತನಿಖೆ — ರಾಜ್ಯ ಸರ್ಕಾರದಿಂದ ಎಸ್ಐಟಿ ನೇಮಕ, #ಅರಸಿನಮಕ್ಕಿ ಬೂಡುಮುಗೇರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶೀರೂರು ಶ್ರೀ ವೇದವರ್ಧನ ಸ್ವಾಮೀಜಿ ಭೇಟಿ – ಪೂರ್ಣ ಕುಂಭ ಸ್ವಾಗತ, #ಉಜಿರೆ ಎಸ್ಡಿಎಂ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಸಮಾರೋಪ, #ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ದಿನೋತ್ಸವ, #ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, #ಕುಡ್ತಾಜೆ: ಶ್ರೀ ಉಳ್ಳಾಕ್ಲು ರುದ್ರ ಚಾಮುಂಡಿ, #ಗುಂಡ್ಯ: ಅಂಬ್ಯುಲೆನ್ಸ್ ವಾಹನ ಕಳವು ಪ್ರಕರಣ: ಆರೋಪಿ ಹಾಸನದಲ್ಲಿ ಬಂಧನ, #ಚಲನಚಿತ್ರ ನಟಿ ಶ್ರುತಿ ಕುಕ್ಕೆ ಸುಬ್ರಹ್ಮಣ್ಯ ಭೇಟಿ, #ಜ.22ರಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ, #ನೆಲ್ಯಾಡಿ ನಿವಾಸಿ ಕೆ.ಸಿ. ವರ್ಗೀಸ್ ಸಾವು ಪ್ರಕರಣ – ಶವ ಪರೀಕ್ಷೆಯಲ್ಲಿ ಬಯಲಾದ ರಹಸ್ಯ: ಬಲವಾದ ಪೆಟ್ಟುಗಳಿಂದ ಮರಣ, #ನೆಲ್ಯಾಡಿ: ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಟ್ಯಾಂಕ್, #ನೆಲ್ಯಾಡಿ: ಪರವಾನಗಿ ಇಲ್ಲದೆ ಅಕ್ರಮ ಮರ ಸಾಗಾಟ ಪತ್ತೆ: ಲಾರಿ, #ರಾಮಕುಂಜ: ಬಾವಿ ತೋಡಲು ಸ್ಪೋಟಕ ಬಳಕೆ, #ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – 11 ಕೆವಿ ಕಂಬ ತುಂಡು
0 Comments
ಕಡಬ: ಸರಸ್ವತೀ ವಿದ್ಯಾಲಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಉಪನ್ಯಾಸ
| ದಾಸ ಸಾಹಿತ್ಯದ ಸಂದೇಶಗಳು ಆಧುನಿಕ ಕಾಲಘಟ್ಟಕ್ಕೂ ಪ್ರಸ್ತುತ: ಗಣೇಶ ಶೆಂಡ್ಯೆ |











ಕಡಬ: ದಾಸ ಸಾಹಿತ್ಯ ಎನ್ನುವುದು ಜೀವನ ಮೌಲ್ಯಗಳ ಗಣಿಯಾಗಿದೆ. ವರ್ಷಾನುಗಟ್ಟಳೆ ಹಿಂದೆ ರಚಿಸಲ್ಪಟ್ಟ ಈ ಮೌಲ್ಯಯುತ ಸಾಹಿತ್ಯಗಳು ಆಧುನಿಕ ಕಾಲಘಟ್ಟಕ್ಕೂ ಪ್ರಸ್ತುತವಾಗಿದೆ ಎಂದು ಚಿಕ್ಕಮಗಳೂರಿನ ಐಡಿಎಸ್ಜಿ ಸರಕಾರಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಗಣೇಶ ಶೆಂಡ್ಯೆ ಅವರು ಅಭಿಪ್ರಾಯಪಟ್ಟರು.
ಅವರು ಬುಧವಾರ ಕಡಬದ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ, ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇದರ ಕಡಬ ತಾಲೂಕು ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕೇವಳ ಹನುಮಾನ್ ನಗರದ ಸರಸ್ವತೀ ವಿದ್ಯಾಲಯದ ಯಾದವಶ್ರೀ ಸಭಾಂಗಣದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಎಂಬ ಜೀವನ ಮೌಲ್ಯಗಳ ಗಣಿ ಎನ್ನುವ ವಿಷಯದಲ್ಲಿ ಉಪನ್ಯಾಸ ನೀಡಿದರು. ದಾಸ ಸಾಹಿತ್ಯದಲ್ಲಿನ ಪದಗಳನ್ನು ಗಮನವಿಟ್ಟು ಹಾಡಿದರೆ ಅಥವಾ ಆಲಿಸಿದರೆ ನಮಗೆ ಸಿಗುವ ಜೀವನ ಮೌಲ್ಯದ ಸಂದೇಶಗಳು ಅಪಾರವಾದುದು. ವಿಶೇಷವಾಗಿ ವಿದ್ಯಾರ್ಥಿಗಳು ಈ ಬಗ್ಗೆ ಆಸಕ್ತಿವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಡಬ ತಾಲೂಕು ಸಮಿತಿಯ ಅಧ್ಯಕ್ಷ ಎನ್.ಕರುಣಾಕರ ಗೋಗಟೆ ಅವರು ಮಾತನಾಡಿ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸದಾಶಿವ ಭಟ್ ಬಿ. ಅವರು ಗುರು ಎಂದರೆ ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವವನು. ಗುರುವಿನ ಮಾರ್ಗದರ್ಶನದಲ್ಲಿ ಸಂಸ್ಕರಯುತವಾದ ಜ್ಞಾನವೆಂಬ ಬೆಳಕನ್ನು ಪಡೆದು ನಾವು ಜೀವನದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಯುವಂತಾಗಬೇಕು. ಸಂಸ್ಕಾರವಿಲ್ಲದ ಯಾವುದೇ ಶೈಕ್ಷಣಿಕ ಪದವಿ ನಮಗೆ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ . ಮಕ್ಕಳು ಕೇವಲ ಪಠ್ಯ ವಿಷಯಗಳಿಗೆ ಮಾತ್ರ ಸೀಮಿತವಾಗದೇ ಪಠ್ಯ ಪೂರಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾದಾಗ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಡಬ ತಾಲೂಕು ಸಮಿತಿ ಕಾರ್ಯದರ್ಶಿ ನಾಗರಾಜ್ ಎನ್.ಕೆ., ಸರಸ್ವತೀ ವಿದ್ಯಾಲಯ ಕನ್ನಡ ಮಾಧ್ಯಮ ವಿಭಾಗದ ಸಂಚಾಲಕಿ ಸವಿತಾ ಶಿವಸುಬ್ರಹ್ಮಣ್ಯ ಭಟ್, ಸರಸ್ವತೀ ಆಂಗ್ಲ ಮಾಧ್ಯಮ ವಿಭಾಗದ ಸಂಚಾಲಕ ಅಜಿತ್ ರೈ ಎ., ಸರಸ್ವತೀ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ವಸಂತ ಕೆ., ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶೈಲಶ್ರೀ ರೈ ಎಸ್., ಪ್ರಮುಖರಾದ ವಸುಧಾ ಗೋಗಟೆ, ಕಾಶಿನಾಥ್ ಗೋಗಟೆ ಮುಂತಾದವರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಪೂರ್ವಿ ಸ್ವಾಗತಿಸಿ, ಯಕ್ಷಿತ್ ವಂದಿಸಿದರು. ಶಿಕ್ಷಕಿ ಸುಮಂಗಲ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ಸೌಮ್ಯ ಕೆ.ಎ. ಕಾರ್ಯಕ್ರಮ ನಿರೂಪಿಸಿದರು.



















Leave a Reply