ಕರಾವಳಿ
# accident #kadaba #shiradi #nellyady #ksrtc, #KOKKADA: ಶಿಬಾಜೆ ಶ್ರೀಧರ ಕೊಲೆ ಪ್ರಕರಣಕ್ಕೆ ಮರು ತನಿಖೆ — ರಾಜ್ಯ ಸರ್ಕಾರದಿಂದ ಎಸ್ಐಟಿ ನೇಮಕ, #ಅರಸಿನಮಕ್ಕಿ ಬೂಡುಮುಗೇರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶೀರೂರು ಶ್ರೀ ವೇದವರ್ಧನ ಸ್ವಾಮೀಜಿ ಭೇಟಿ – ಪೂರ್ಣ ಕುಂಭ ಸ್ವಾಗತ, #ಉಜಿರೆ ಎಸ್ಡಿಎಂ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಸಮಾರೋಪ, #ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ದಿನೋತ್ಸವ, #ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, #ಕುಡ್ತಾಜೆ: ಶ್ರೀ ಉಳ್ಳಾಕ್ಲು ರುದ್ರ ಚಾಮುಂಡಿ, #ಗುಂಡ್ಯ: ಅಂಬ್ಯುಲೆನ್ಸ್ ವಾಹನ ಕಳವು ಪ್ರಕರಣ: ಆರೋಪಿ ಹಾಸನದಲ್ಲಿ ಬಂಧನ, #ಚಲನಚಿತ್ರ ನಟಿ ಶ್ರುತಿ ಕುಕ್ಕೆ ಸುಬ್ರಹ್ಮಣ್ಯ ಭೇಟಿ, #ಜ.22ರಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ, #ನೆಲ್ಯಾಡಿ ನಿವಾಸಿ ಕೆ.ಸಿ. ವರ್ಗೀಸ್ ಸಾವು ಪ್ರಕರಣ – ಶವ ಪರೀಕ್ಷೆಯಲ್ಲಿ ಬಯಲಾದ ರಹಸ್ಯ: ಬಲವಾದ ಪೆಟ್ಟುಗಳಿಂದ ಮರಣ, #ನೆಲ್ಯಾಡಿ: ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಟ್ಯಾಂಕ್, #ನೆಲ್ಯಾಡಿ: ಪರವಾನಗಿ ಇಲ್ಲದೆ ಅಕ್ರಮ ಮರ ಸಾಗಾಟ ಪತ್ತೆ: ಲಾರಿ, #ರಾಮಕುಂಜ: ಬಾವಿ ತೋಡಲು ಸ್ಪೋಟಕ ಬಳಕೆ, #ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – 11 ಕೆವಿ ಕಂಬ ತುಂಡು
0 Comments
ಕೌಕ್ರಾಡಿ: ಕೃಷಿ ಸ್ವಉದ್ಯೋಗ ತರಬೇತಿ










ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ.), ಕಡಬ ತಾಲೂಕು, ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದಲ್ಲಿ ಭಾನುವಾರ ಕೃಷಿ ಸ್ವಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಪ್ರಗತಿಪರ ಕೃಷಿಕ ಬಾಲಕೃಷ್ಣ ಹಾರ್ಪಾಳ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್ ಮಾತನಾಡಿ ಕೃಷಿಯಲ್ಲಿ ಯಶಸ್ಸು ಸಾಧಿಸಲು ಮೊದಲು ಮಣ್ಣಿನ ಪರೀಕ್ಷೆ, ಗುಣಮಟ್ಟದ ಬಿತ್ತನೆ ಬೀಜಗಳ ಆಯ್ಕೆ ಹಾಗೂ ಸೂಕ್ತ ರಸಗೊಬ್ಬರಗಳ ಬಳಕೆ ಅತ್ಯಂತ ಮುಖ್ಯ ಎಂದು ತಿಳಿಸಿದರು. ರೈತರು ಏಕಬೆಳೆ ಪದ್ಧತಿಯನ್ನು ಅವಲಂಬಿಸದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಉತ್ತಮ ಗುಣಮಟ್ಟದ ಬೆಳೆ ಪಡೆಯಲು ಸಾಧ್ಯವಾಗುವುದರ ಜೊತೆಗೆ ಹೆಚ್ಚಿನ ಲಾಭವೂ ದೊರೆಯುತ್ತದೆ ಎಂದು ಹೇಳಿದರು.
ರೈತರು ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳುವುದು, ಮೌಲ್ಯವರ್ಧನೆ ಮೂಲಕ ಸ್ವಉದ್ಯೋಗ ಆರಂಭಿಸುವುದು ಹಾಗೂ ಬೆಳೆ ವಿಮೆ ಮಾಡಿಸಿಕೊಳ್ಳುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂದರಿ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೌಮ್ಯ ಸ್ವಾಗತಿಸಿದರು, ಹೇಮಲತಾ ನಿರೂಪಿಸಿದರು, ಹರ್ಷಿತಾ ವಂದಿಸಿದರು.



















Leave a Reply