ಉಜಿರೆ: ಪವರ್ ಕೇರ್ ಬ್ಯಾಟರಿ ಮತ್ತು ಸೋಲಾರ್ ಸಿಸ್ಟಮ್ ಮಳಿಗೆ ಉದ್ಘಾಟನೆ

ನೇಸರ ಮಾ.30: ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಅವರು ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಉಜಿರೆಯ ಚಾರ್ಮಾಡಿ ರಸ್ತೆಯ ಹಳ್ಳಿಮನೆ ಹೋಟೆಲ್ ನ ಬಳಿ ಧರ್ಮಶ್ರೀ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊಂಡ ಪವರ್ ಕೇರ್ ಬ್ಯಾಟರಿ ಮತ್ತು ಸೋಲಾರ್ ಸಿಸ್ಟಮ್ ಮಳಿಗೆಯನ್ನು ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕರಾದ ಡೊಂಬಯ್ಯ ಗೌಡ ಆರಿಕೋಡಿ, ಅಧ್ಯಕ್ಷರಾದ ವಸಂತಗೌಡ ಅರಿಕೋಡಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕರಾದ ಮಹೇಶ್ ಶೆಟ್ಟಿ ತಿಮರೋಡಿ, ಉದ್ಯಮಿಗಳಾದ ರಾಮಚಂದ್ರ ಶೆಟ್ಟಿ ಉಜಿರೆ, ಕಟ್ಟಡ ಮಾಲಕರಾದ ವಿಶ್ವನಾಥ, ಮಹಾವೀರ ಬ್ಯಾಟರಿಸ್ ಬೆಳ್ತಂಗಡಿಯ ಮಾಲಕರಾದ ವಸಂತ ಮಹಾವೀರ, ಪವರ್ ಆನ್ ಬ್ಯಾಟರಿ ಬೆಳ್ತಂಗಡಿ ಸಂಸ್ಥೆಯ ಮಾಲಕರಾದ ಶೀತಲ್ ಜೈನ್, ಗಣೇಶ್ ಬ್ಯಾಟರಿ ಬೆಳ್ತಂಗಡಿ ಸಂಸ್ಥೆಯ ಮಾಲಕರಾದ ಉಮೇಶ್, ಸಪ್ತ ಬ್ಯಾಟರಿ ಗುರುವಾಯನಕೆರೆ ಸಂಸ್ಥೆಯ ಮಾಲಕರಾದ ಜಯರಾಜ್, ಮಾನವಿ ಎಂಟರ್ಪ್ರೈಸಸ್ ಬೆಳ್ತಂಗಡಿ ಸಂಸ್ಥೆಯ ಮಾಲಕರಾದ ತುಳಸೀಧರ, ಇಂಡಿಯನ್ ಬೇಕರಿ ಸಂಸ್ಥೆಯ ಮಾಲಕರಾದ ಗಣೇಶ್ ಉಜಿರೆ, ಸಂಸ್ಥೆಯ ಮಾಲಕರ ತಂದೆ ಲಿಂಗಪ್ಪ ಪೂಜಾರಿ, ತಾಯಿ ಪ್ರೇಮ ಹೊಸಮನೆ ಕಕ್ಕಿಂಜೆ ಉಪಸ್ಥಿತರಿದ್ದರು.

ಆಗಮಿಸಿದ ಎಲ್ಲರನ್ನು ಸಂಸ್ಥೆಯ ಮಾಲಕರಾದ ಪ್ರವೀಣ್ ಉಜಿರೆ ಹಾಗೂ ಸಿಬ್ಬಂದಿ ವರ್ಗ ಸ್ವಾಗತಿಸಿ, ಎಲ್ಲರ ಸಹಕಾರವನ್ನು ಕೋರಿದರು. ಧನ್ಯವಾದ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಚಂದ್ರಹಾಸ ಬಳಂಜ ನೆರವೇರಿಸಿದರು.
—ಜಾಹೀರಾತು—


















Leave a Reply