ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ 2021-22 ಸಾಲಿನ ವಾರ್ಷಿಕ ಕ್ರೀಡಾಕೂಟ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ 2021-22 ಸಾಲಿನ ವಾರ್ಷಿಕ ಕ್ರೀಡಾಕೂಟ

ನೇಸರ ಎ.02: ಶ್ರೀರಾಮ ವಿದ್ಯಾಲಯದಲ್ಲಿ 2021-22 ಸಾಲಿನ ವಾರ್ಷಿಕ ಕ್ರೀಡಾಕೂಟ ಕ್ರೀಡಾ ಸಂಭ್ರಮವನ್ನು ನಿವೃತ ಪೋಲಿಸ್ ಅಧಿಕಾರಿಯಾದ ಚೆನ್ನಪ್ಪ ಗೌಡ ರವರು ಉದ್ಘಾಟಿಸಿದರು. ಕಾರ್ಯಕ್ರಮ ಮುಖ್ಯ ಅತಿಥಿ, ಕ್ರೀಡಾ ನಿರೂಪಕರಾದ ಸುರೇಶ ಪಡಿಪಂಡ ಮಾತನಾಡಿ ಆಟದಲ್ಲಿ ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆ ಮೈಗೂಡಿಸಿದರೆ ಮಾತ್ರ ಯಶಸ್ಸು ಸಾಧ್ಯ ಎಂಬ ಕಿವಿಮಾತಿನೊಂದಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಡಳಿತ ಮಂಡಳಿಯ ಅಧ್ಯಕ್ಷರಾದ ರವಿಚಂದ್ರ ಹೊಸವಕ್ಲು, ಕಾರ್ಯದರ್ಶಿಗಳಾದ ಬಾಲಕೃಷ್ಣ ಬಾಣಜಾಲು, ಕ್ರೀಡಾ ತರಬೇತುದಾರರಾದ ಸಂತೋಷ್ ಕೊಲ್ಯೊಟ್ಟು, ಮುಖ್ಯ ಗುರುಗಳಾದ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು.
ಶಿಕ್ಷಕ ಅನಿಲ್ ಅಕ್ಕಪ್ಪಾಡಿ ಸ್ವಾಗತಿಸಿ, ಶ್ರೀಮತಿ ಸೂರ್ಯ ಮಾತಾಜಿ ಧನ್ಯವಾದವಿತ್ತರು. ಕುಮಾರಿ ಅನಿತಾ ಮಾತಾಜಿ ಕಾರ್ಯಕ್ರಮ ನಿರ್ವಹಿಸಿ ದರು.

ವೀಕ್ಷಿಸಿ SUBSCRIBERS ಮಾಡಿ

 

—ಜಾಹೀರಾತು—

 

Leave a Reply

You May Have Missed

error: Content is protected !!