ಕಡಬ: ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು

ಕಡಬ: ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು

ನೇಸರ ಎ.03: ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಡಬ ಸಮೀಪದ ಪಿಜಕ್ಕಳ ಎಂಬಲ್ಲಿ ಭಾನುವಾರ(ಎ.03) ಅಪರಾಹ್ನ ಸಂಭವಿಸಿದೆ.
ನರಿಮೊಗರು ಐಟಿಐ ನ ವಿದ್ಯಾರ್ಥಿ, ಕಡಬ ಹೈಸ್ಕೂಲ್ ಬಳಿಯ ಮಜ್ಜಗುಡ್ಡೆ ನಿವಾಸಿ ನಾವುರ ಅವರ ಪುತ್ರ ನಿತೇಶ್ (18) ಮೃತ ವಿದ್ಯಾರ್ಥಿ. ಈತ ತನ್ನ ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನ ಮಾಡಲು ನೀರಿಗಿಳಿದಿದ್ದ ವೇಳೆ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸುದ್ದಿ ತಿಳಿದ ಕಡಬ ಪೊಲೀಸರು ಸ್ಥಳಕ್ಕೆ ತೆರಳಿ. ಸ್ಥಳೀಯ ಈಜುಗಾರರಾದ ದಯಾನಂದ ಪೊಯ್ಯೇತಡ್ಡ ಹಾಗೂ ಮುರಳಿ ಮೂರಾಜೆ ಅವರು ಪೊಲೀಸರ ಸಮಕ್ಷಮದಲ್ಲಿ ಮೃತ ದೇಹವನ್ನು ನದಿಯಿಂದ ಮೇಲೆತ್ತಿದ್ದಾರೆ.
ಮೃತ ಯುವಕ ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾನೆ.

 

—ಜಾಹೀರಾತು—

Leave a Reply

You May Have Missed

error: Content is protected !!