ಕುಂಟಾಲಪಲ್ಕೆ: ನಿಧನರಾದ ಸೋಮಯ್ಯ ಆಚಾರ್ಯರಿಗೆ ಪುಷ್ಪ ನಮನ ಸಲ್ಲಿಸಿಕೆ

ಕುಂಟಾಲಪಲ್ಕೆ: ನಿಧನರಾದ ಸೋಮಯ್ಯ ಆಚಾರ್ಯರಿಗೆ ಪುಷ್ಪ ನಮನ ಸಲ್ಲಿಸಿಕೆ

ನೇಸರ ಎ.03: ಇತ್ತೀಚಿಗೆ ನಿಧನರಾದ ಹತ್ಯಡ್ಕ ಗ್ರಾಮದ ನಾವಳೆ ನಿವಾಸಿ ಸೋಮಯ್ಯ ಆಚಾರ್ಯ ಅವರಿಗೆ ಕಪಿಲ ಕೇಸರಿ ಯುವಕ ಮಂಡಲ ಕುಂಟಾಲಪಲ್ಕೆ ಇದರ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.
ಹತ್ಯಡ್ಕ ಗ್ರಾಮದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂ ಸೇವಕರಾಗಿ ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ ತುರ್ತುಪರಿಸ್ಥಿತಿ ಯಂತಹ ಕರಾಳ ಸಂದರ್ಭದಲ್ಲಿಯೂ ಪಕ್ಷ ಸಮಾಜ ಸಂಘಟನೆಯನ್ನೇ ಉಸಿರಾಗಿಸಿಕೊಂಡಿದ್ದ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ದುಡಿದು ಅಜಾತಶತ್ರು ಎನಿಸಿಕೊಂಡಿದ್ದ ಸರಳ ಸಜ್ಜನ ವಿನಮ್ರ ವ್ಯಕ್ತಿತ್ವದ ಹಾಗೂ ಕಪಿಲ ಕೇಸರಿ ಯುವಕ ಮಂಡಲದ ಯುವಕರಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದ ಸೋಮಯ್ಯ ಆಚಾರ್ಯರಿಗೆ ಊರಿನ ಹಿರಿಯರು, ಗೌರವಾನ್ವಿತರು, ಮಹಿಳೆಯರು ಹಾಗೂ ಯುವಕರು ಪುಷ್ಪ ನಮನ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ಅಡ್ಕಾಡಿ ಧರ್ಮರಾಜ್ ಗೌಡ, ಅಶೋಕ್ ಬೀಡೆ, ವೃಷಾಂಕ್ ಖಾಡಿಲ್ಕರ್, ಮುರಳಿದರ ಗೌಡ, ದಿವಾಕರ ಭಟ್ ಮುದ್ದಿಗೆ, ಮೋಹನ್ ಶೆಟ್ಟಿ ಮುದ್ದಿಗೆ, ಸುಮಂತ್ ಗೌಡ ಅಳಕ್ಕೆ ಇವರೆಲ್ಲ ಸೋಮಯ್ಯ ಆಚಾರ್ಯ ಅವರ ಒಡನಾಟವನ್ನು ನೆನಪಿಸಿಕೊಂಡರು. ಶ್ರೀವತ್ಸ ಗೋಖಲೆ ಕಾರ್ಯಕ್ರಮ ನಿರೂಪಿಸಿದರು
.

ವೀಕ್ಷಿಸಿ SUBSCRIBERS ಮಾಡಿ

Leave a Reply

You May Have Missed

error: Content is protected !!