ಶಿಬಾಜೆ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ: ಆಮಂತ್ರಣ ಪತ್ರ ಬಿಡುಗಡೆ

ಶಿಬಾಜೆ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ: ಆಮಂತ್ರಣ ಪತ್ರ ಬಿಡುಗಡೆ

ನೇಸರ ಎ.05: ಶ್ರೀ ಕ್ಷೇತ್ರ ಮೊಂಟೆತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ:18-04-2022 ಸೋಮವಾರದಿಂದ 21-04-2022 ಗುರುವಾರದ ತನಕ ನಡೆಯುವ ಸಹಸ್ರ ನಾಳಿಕೇರ, ಮಹಾಗಣಪತಿ ಹೋಮ ಹಾಗೂ ನಾಗಪ್ರತಿಷ್ಠಾ ಕಲಶ ಮತ್ತು ಅಶ್ವತ್ಥೋಪನಯನ ವಿವಾಹಾಂತ ಸಂಸ್ಕಾರಗಳ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಲ್ಲಿ ಎ.5ರಂದು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಹಸ್ರ ನಾಳಿಕೇರ ಮಹಾಗಣಪತಿ ಹೋಮ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಹರೀಶ್ ಪೂಂಜ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು ರಾಘವೇಂದ್ರ ನಾಯಕ್, ಗ್ರಾ.ಪಂ ಅಧ್ಯಕ್ಷ ರತೀಶ್ ಗೌಡ, ಗ್ರಾ.ಪಂ ಸದಸ್ಯ ದಿನಕರ್ ಕುರುಪ್, ಚೆನ್ನಪ್ಪ ಗೌಡ ಕುರುಂಜ, ಯೋಗೀಶ್ ಶಿಬಾಜೆ, ಪುರುಷೋತ್ತಮ ಕುರುಂಬು, ಮೋಹನ್ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಪ್ಪ ಗೌಡ ಬೇಂಗಳ, ಜಯಪ್ರಕಾಶ್ ರಾವ್ ಅಜಿರಡ್ಕ, ಮಮತಾ, ಅನಿಲ್ ಉಜಿರೆ, ದೀಪಕ್ ಶಿಬಾಜೆ, ಯೋಜನಾ ಸಿಬ್ಬಂದಿಗಳು, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು

 

—ಜಾಹೀರಾತು—

.

Previous post

ಕೊಕ್ಕಡದಲ್ಲಿ ಅರಣ್ಯ ಇಲಾಖೆಯ ದೌರ್ಜನ್ಯ, ಬಡ ರೈತನ ಕೃಷಿ ನಾಶಕ್ಕೆ ರೈತ ಸಂಘ ಖಂಡನೆ ಹಾಗೂ ಪ್ರತಿಭಟನೆಗೆ ಸಿದ್ದತೆ

Next post

ಉದನೆ ಸೇತುವೆ ಹೋರಾಟ ಸಮಿತಿಯಿಂದ ಸೇತುವೆ ನಿರ್ಮಾಣಕ್ಕೆ ಕಾರಣಕರ್ತರಾದ ರಮಾನಾಥ ರೈಯವರಿಗೆ ಸನ್ಮಾನ

Leave a Reply

You May Have Missed

error: Content is protected !!