ವಿದ್ಯುದಾಘಾತ : ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ವಸಂತ ಮುಗೇರ ಮೃತದೇಹ

ವಿದ್ಯುದಾಘಾತ : ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ವಸಂತ ಮುಗೇರ ಮೃತದೇಹ

ನೇಸರ ಎ.08: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪೆರ್ಮುಡ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಗ್ರಾಮದ ವಸಂತ ಮುಗೇರ(25) ಎಂಬವರ ದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹಳೆಯ ಹೆಚ್ ಟಿ ಲೈನೊಂದು ಕಾಡಿನ ಮಧ್ಯೆ ಇದ್ದು, ರಸ್ತೆ ಪಕ್ಕ ಹೊಸ ಲೈನ್ ಅಳವಡಿಸಿದ ನಂತರ ಹಳೆಯ ಲೈನ್ ನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಆದರೆ ತಂತಿಯನ್ನು ತೆರವುಗೊಳಿಸಿರಲಿಲ್ಲ.
ಎ.8ರ ಸಂಜೆ ವಸಂತ‌ ಹಳೆಯ ತಂತಿಯನ್ನು ತೆಗೆಯುವ ಸಂದರ್ಭದಲ್ಲಿ ಅದು ವಿದ್ಯುತ್ ಪ್ರವಹಿಸುತ್ತಿರುವ ತಂತಿಗೆ ಸ್ಪರ್ಶಿಸಿದ ಕಾರಣ ವಸಂತ ರವರಿಗೆ‌ ವಿದ್ಯುತ್ ಆಘಾತ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ವಸಂತ ‌ಹಳೆ ತಂತಿಯನ್ನು ತೆಗೆಯಲು ಹೋಗಿರುವುದಕ್ಕೆ ‌ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳಾದ ಕ್ಲೆಮೆಂಟ್ ಬೆಂಜಾಮಿನ್ ಬ್ರಾಗ್ಸ್, ಸುಹಾಸ್ ಕುಮಾರ್, ಕೃಷ್ಣೆ ಗೌಡ, ಅಶೋಕ್ ಜೈನ್ ಮೊದಲಾದವರು ಭೇಟಿ‌ನೀಡಿದ್ದಾರೆ. ಘಟನಾ ಸ್ಥಳ ಧರ್ಮಸ್ಥಳ ಠಾಣಾ ವ್ಯಾಪ್ತಿಗೆ ಬರುತ್ತಿದ್ದು ಎಸ್‌ಐ ಕೃಷ್ಣ ಕಾಂತ್ ಹಾಗೂ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!