ಕೊಕ್ಕಡ ಸೀಮೆಯ ಮಾಯಿಲಕೋಟೆ ಪ್ರತಿಷ್ಠಾಮಹೋತ್ಸವದ ಕಾರ್ಯಾಲಯ ಉದ್ಘಾಟನೆ

ನೇಸರ ಎ.09: ಕೊಕ್ಕಡ ಸೀಮೆಯ ಮಾಯಿಲಕೋಟೆ ದೈವ ಸನ್ನಿಧಿ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವವು ಮೇ.11 ರಿಂದ 13ರವರೆಗೆ ಜರುಗಲಿದ್ದು, ಇದರ ಪ್ರಯುಕ್ತ ಪ್ರತಿಷ್ಠಾಮಹೋತ್ಸವದ ಕಾರ್ಯಾಲಯವನ್ನು ಎ.8 ರಂದು ಉದ್ಘಾಟಿಸಲಾಯಿತು.


ಕಾರ್ಯಾಲಯವನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ ರಾವ್ ಉದ್ಘಾಟಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾ ಮಹೋತ್ಸವದ ಪ್ರಧಾನ ಸಂಚಾಲಕ ಜಯರಾಮ ನೆಲ್ಲಿತ್ತಾಯ, ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಡಾ|ಬಿ ಮೋಹನದಾಸ್ ಗೌಡ, ಪ್ರಧಾನ ಕಾರ್ಯದರ್ಶಿ ಶಾಂತರಾಮ ಎ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಯರಾಮ ಗೌಡ ಹಾರ, ಕಾರ್ಯದರ್ಶಿ ಬಿ.ಶೀನ ನಾಯ್ಕ, ಜೊತೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಟಿ.ಎಂ, ಪ್ರತಿಷ್ಠಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಜಯರಾಮ ಗೌಡ ನ್ಯೂ ಆರಿಗ, ಕಾರ್ಯದರ್ಶಿ ಸುರೇಶ್ ಪಡಿಪಂಡ,ಜಯಾನಂದ ಬಂಟ್ರಿಯಾಲ್, ಕೊಕ್ಕಡ ಗ್ರಾಮ ಪಂಚಾಯತ್ ನ ಅಧ್ಯಕ್ಷ ಯೋಗೀಶ್ ಆಲಂಬಿಲ, ಪುರಂದರ ಗೌಡ ಕಡೀರ, ಕುಂಞಪ್ಪ ಗೌಡ, ಚಂದ್ರಹಾಸ್ ಪನ್ಯಾಡಿ, ಮಾಯಿಲಕೋಟೆ ಸಮುದಾಯದವರು, ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸುರೇಶ್ ಪಡಿಪಂಡ ಸ್ವಾಗತಿಸಿ, ಜಯರಾಮ ಗೌಡ ಹಾರ ಧನ್ಯವಾದಗೈದರು. ನಂತರ ವಿವಿಧ ಸಮಿತಿಗಳ ಸಭೆ ಜರುಗಿತು.
—ಜಾಹೀರಾತು—

















Leave a Reply