ನೆಲ್ಯಾಡಿ: ಸಮರ್ಪಕ ಚರಂಡಿ ಇಲ್ಲದೇ ಹೆದ್ದಾರಿಯಲ್ಲಿಯೇ ಹರಿದ ಮಳೆ ನೀರು, ವಾಹನ ಸವಾರರ ಪರದಾಟ

ನೆಲ್ಯಾಡಿ: ಸಮರ್ಪಕ ಚರಂಡಿ ಇಲ್ಲದೇ ಹೆದ್ದಾರಿಯಲ್ಲಿಯೇ ಹರಿದ ಮಳೆ ನೀರು, ವಾಹನ ಸವಾರರ ಪರದಾಟ

ನೇಸರ ಎ.10: ರಾಷ್ಟ್ರೀಯ ಹೆದ್ದಾರಿ 75 ನೆಲ್ಯಾಡಿ ಸಮೀಪ ಹೊಸಮಜಲು ಎಂಬಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ವಿಪರೀತ ಸುರಿದ ಮಳೆಯಿಂದಾಗಿ ಮಳೆ ನೀರು ರಸ್ತೆಯಲ್ಲಿಯೇ ನಿಂತ ಪರಿಣಾಮ ವಾಹನ ಸವಾರರು ಸಮಸ್ಯೆಗೆ ಸಿಲುಕಿದ ಘಟನೆ ಎ.9ರ ಶನಿವಾರ ಸಂಜೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅಡ್ಡಹೊಳೆ-ಬಿ.ಸಿ.ರೋಡ್ ಮಧ್ಯೆ ವೇಗದಿಂದ ನಡೆಯುತ್ತಿದ್ದು, ಅಲ್ಲಲ್ಲಿ ರಸ್ತೆ ಅಗೆಯಲಾಗಿದೆ. ಮಳೆ ಬರುವ ಮುನ್ಸೂಚನೆ ಇದ್ದರೂ ಗುತ್ತಿಗೆದಾರರು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದು ಹಾಗೂ ಹಲವು ಕಡೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡದ ಕಾರಣ ಎ.9ರ ಶನಿವಾರ ಸಂಜೆ ವಿಪರೀತ ಸುರಿದ ಮಳೆಯಿಂದಾಗಿ ಕೆಸರು ನೀರು ಹೆದ್ದಾರಿಯಲ್ಲಿಯೇ ನಿಂತಿದೆ. ಇದರಿಂದಾಗಿ ದ್ವಿಚಕ್ರ ಸೇರಿದಂತೆ ಇತರೇ ವಾಹನ ಸವಾರರು ಸಮಸ್ಯೆಗೆ ಸಿಲುಕಿದ್ದರು ಎಂಬ ದೂರು ಸಾರ್ವಜನಿಕರಿಂದ ಕೇಳಿಬಂದಿದೆ.

 

—ಜಾಹೀರಾತು—

Leave a Reply

You May Have Missed

error: Content is protected !!