ಇಚ್ಲಂಪಾಡಿ: ನಾಟಿ ವೈದ್ಯೆ ಮೋನಮ್ಮ ನಿಧನ

ಇಚ್ಲಂಪಾಡಿ: ನಾಟಿ ವೈದ್ಯೆ ಮೋನಮ್ಮ ನಿಧನ

ನೇಸರ ಎ.13:ಇಚ್ಲಂಪಾಡಿ ಗ್ರಾಮದ ಬಿಜೇರು ನಿವಾಸಿ, ನಾಟಿ ವೈದ್ಯೆ ಮೋನಮ್ಮ (91ವ.) ರವರು ಅಲ್ಪ ಕಾಲದ ಅಸೌಖ್ಯದಿಂದ ಎ.13ರಂದು ಬೆಳಗ್ಗೆ ಸ್ವಗ್ರಹದಲ್ಲಿ ನಿಧನರಾದರು. ಮೃತರು ವಿಷಜಂತು ಕಡಿತ, ಕೆಂಪು ಸೇರಿದಂತೆ ಇನ್ನಿತರ ಖಾಯಿಲೆ ಗಳಿಗೆ ನಾಟಿ ಔಷಧಿ ನೀಡುತ್ತಿದ್ದರು. ಸಹೋದರಿ ಜೊತೆ ವಾಸವಾಗಿದ್ದ ಇವರು ಸಹೋದರಿ ಜಾನಕಿ, ಸಹೋದರಿಯ ಪುತ್ರ ವಸಂತ ಗೌಡ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!