ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಪಟ್ರಮೆಯ ಬಡವರ ಮನೆಗೆ ಭೇಟಿ

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಪಟ್ರಮೆಯ ಬಡವರ ಮನೆಗೆ ಭೇಟಿ

ನೇಸರ ಎ15: ಮೊಗೇರ ಸಮೃದ್ಧಿ ಸೇವಾ ಸಂಘ ದ.ಕ ಜಿಲ್ಲೆ ಇದರ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 131ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ತೀರಾ ಬಡತನದಲ್ಲಿರುವ ಮನೆಗೆ ಭೇಟಿ ಕಾರ್ಯಕ್ರಮ ಎ.14 ರಂದು ನಡೆಯಿತು.
ಪಟ್ರಮೆ ಗ್ರಾಮದ ಮೈಕೆ ಎಂಬಲ್ಲಿಯ ಗೌಡ ಸಮುದಾಯದ ಆರ್ಥಿಕವಾಗಿ ತೀರಾ ಬಡತನದಲ್ಲಿರುವ ಭಾರತಿ ಎಂಬವರ ಮನೆಗೆ ಸಂಘದ ವತಿಯಿಂದ ಭೇಟಿ ನೀಡಿ 25 ಕೆ.ಜಿ ಅಕ್ಕಿ ಹಾಗೂ ಅಡುಗೆ ಬೇಕಾದ ಅಗತ್ಯ ಸಾಮಾನುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸದಾಶಿವ ನಿಡ್ಲೆ, ಉಪಾಧ್ಯಕ್ಷ ಮಂಜುನಾಥ್ ಧರ್ಮಸ್ಥಳ ಹಾಗೂ ವೆಂಕಪ್ಪ ಗೌಡ ಮಲ್ಲರ್ಮಡಿ ಧರ್ಮಸ್ಥಳ ಹಾಗೂ ಮನೆಯವರು ಉಪಸ್ಥಿತರಿದ್ದರು.

 

—ಜಾಹೀರಾತು—

Leave a Reply

You May Have Missed

error: Content is protected !!