ಉಜಿರೆ: ಕರ್ತವ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟ ಎಸ್.ಡಿ.ಎಂ ಕಾಲೇಜಿನ ವಾಚ್ ಮ್ಯಾನ್

ಉಜಿರೆ: ಕರ್ತವ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟ ಎಸ್.ಡಿ.ಎಂ ಕಾಲೇಜಿನ ವಾಚ್ ಮ್ಯಾನ್

ನೇಸರ ಎ.16: ಉಜಿರೆ: ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ 15 ವರ್ಷಗಳಿಂದ ವಾಚ್ ಮ್ಯಾನ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಕಲ್ಮಂಜ ಗ್ರಾಮದ ಪಜಿರಡ್ಕ ನಿವಾಸಿ ಹೂವಯ್ಯ ಗೌಡ(55) ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಎ.15 ರಂದು ಬೆಳಿಗ್ಗೆ 5 ಗಂಟೆಗೆ ತಲೆಸುತ್ತು ಬಂದು ಅಲ್ಲೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಹೂವಯ್ಯ ಗೌಡ ಸುಮಾರು 6 ತಿಂಗಳುಗಳಿಂದ ಬಿಪಿ, ಸುಗರ್, ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಯೂ ಪಡೆದುಕೊಂಡಿದ್ದರು. ಆದರೆ ಎ.15 ರಂದು ಎಂದಿನಂತೆ ಎಸ್.ಡಿ.ಎಂ ಕಾಲೇಜಿನಲ್ಲಿ ವಾಚ್ ಮ್ಯಾನ್ ಕೆಲಸ ಮಾಡುತ್ತಿರುವ ವೇಳೆ ತಲೆಸುತ್ತು ಬಂದು ಕುಸಿದು ಬಿದ್ದಿದ್ದರು. ಅದನ್ನು ಕಂಡ ರಾಜಾರಾಮ ಮತ್ತು ರಾಹುಲ್ ಎಂಬ ವಿದ್ಯಾರ್ಥಿಗಳು ಕೂಡಲೇ ಚಿಕಿತ್ಸೆಗಾಗಿ ಎಸ್.ಡಿ.ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಹೂವಯ್ಯ ಗೌಡ ರವರನ್ನು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಹೂವಯ್ಯ ಗೌಡರ ಪುತ್ರಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

 

—ಜಾಹೀರಾತು—

Leave a Reply

You May Have Missed

error: Content is protected !!