ನೆಲ್ಯಾಡಿ: ನೀರಕಟ್ಟೆಯಲ್ಲಿ ಕಾರು, ಬಸ್ಸು ಅಪಘಾತದಲ್ಲಿ ಗಂಭೀರ ಗಾಯಗೊಂಡ ಶ್ರೀಮತಿ ರೆಜಿಜೋಸೆಫ್ ನಿಧನ

ನೆಲ್ಯಾಡಿ: ನೀರಕಟ್ಟೆಯಲ್ಲಿ ಕಾರು, ಬಸ್ಸು ಅಪಘಾತದಲ್ಲಿ ಗಂಭೀರ ಗಾಯಗೊಂಡ ಶ್ರೀಮತಿ ರೆಜಿಜೋಸೆಫ್ ನಿಧನ

ನೇಸರ ಎ21: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ನಾಲ್ಕು ಜನ ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಎ.16ರಂದು ಮಧ್ಯಾಹ್ನ ನಡೆದಿತ್ತು
ಅಪಘಾತದಲ್ಲಿ ತೀವ್ರ ಗಾಯಗೊಂಡ ಶ್ರೀಮತಿ ರೆಜಿಜೋಸೆಫ್ (50ವ) ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು.
ಇವರು ನೆಲ್ಯಾಡಿಯ ಪಡ್ಡಡ್ಕ ನಿವಾಸಿಯಾಗಿದ್ದು ಪ್ರಸ್ತುತ ಲೇಡಿಗೋಷನ್ ಹಾಸ್ಪಿಟಲ್ ಮಂಗಳೂರಿನಲ್ಲಿ ಸ್ಟಾಪ್ ನರ್ಸ್. ಇದೇ ಸಂದರ್ಭದಲ್ಲಿ ಇವರ ಜೊತೆಗಿದ್ದ ಪತಿ ಜೋಸೆಫ್, ಒಬ್ಬ ಮಗ ಹಾಗೂ ಒಬ್ಬ ಮಗಳು ಘಟನೆಯಲ್ಲಿ ಗಾಯಗೊಂಡಿದ್ದು ಇವರು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರು ಪತಿ, 4 ಗಂಡು, 1 ಹೆಣ್ಣು ಹಾಗೂ ತಂದೆ-ತಾಯಿ, ಸಹೋದರನನ್ನು ಅಗಲಿದ್ದಾರೆ.

 

—ಜಾಹೀರಾತು—

Leave a Reply

You May Have Missed

error: Content is protected !!