ರಾಜ್ಯಾದ್ಯಂತ ಮಂಗಳವಾರ ರಂಜಾನ್ ಹಬ್ಬ ಆಚರಣೆ

ರಾಜ್ಯಾದ್ಯಂತ ಮಂಗಳವಾರ ರಂಜಾನ್ ಹಬ್ಬ ಆಚರಣೆ

ನೇಸರ ಮೇ‌ 1: ರಾಜ್ಯಾದ್ಯಂತ ಮಂಗಳವಾರ ಈದ್ ಉಲ್ ಫಿತ್ರ್ (ರಂಜಾನ್ ಹಬ್ಬ) ಆಚರಿಸಲಾಗುವುದು. ರಾಜ್ಯ ವಕ್ಫ್ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಕೇಂದ್ರ ‌ಚಂದ್ರ ದರ್ಶನ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ರಾಜ್ಯ ಹಾಗೂ ದೇಶದ ಯಾವ ಭಾಗದಲ್ಲಿಯೂ ಚಂದ್ರದರ್ಶವಾದ ಬಗ್ಗೆ ವರದಿಯಾಗದ ಹಿನ್ನಲೆಯಲ್ಲಿ ಮಂಗಳವಾರ ಹಬ್ಬ ಆಚರಿಸಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಕೇಂದ್ರ ಚಂದ್ರದರ್ಶನ ಸಮಿತಿಯ ಮೌಲಾನ ಮಕ್ಸೂದ್ ಇಮ್ರಾನ್ ರಷಾದಿ ತಿಳಿಸಿದ್ದಾರೆ.
ಈಗಾಗಲೇ ಹಬ್ಬ ಆಚರಣೆಗೆ ಸಂಬಂಧಿಸಿ ಸೋಮವಾರ ರಜೆ ಘೋಷಿಸಿ ಸರಕಾರ ಆದೇಶ ಹೊರಡಿಸಿದೆ.

 

🌺 ಜಾಹೀರಾತು 🌺

Previous post

ಶಿಶಿಲೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರ ಪುತ್ರ ಸೂರ್ಯನಾರಾಯಣ ರಾವ್ ಮೆದುಳು ರಕ್ತಸ್ರಾವದಿಂದ ನಿಧನ

Next post

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ- ಇಂದಿನಿಂದ(ಮೇ.2) ಮೇ 9 ರವರೆಗೆ

Leave a Reply

You May Have Missed

error: Content is protected !!