||ದೀಪಾವಳಿ ಹಬ್ಬದ ಪ್ರಯುಕ್ತ ಕುಟುಂಬ ಮಿಲನ ಕಾರ್ಯಕ್ರಮ|| ನೆಲ್ಯಾಡಿ-ಹೊಸವಕ್ಲು

||ದೀಪಾವಳಿ ಹಬ್ಬದ ಪ್ರಯುಕ್ತ ಕುಟುಂಬ ಮಿಲನ ಕಾರ್ಯಕ್ರಮ|| ನೆಲ್ಯಾಡಿ-ಹೊಸವಕ್ಲು

ನೇಸರ ನ6: ನೆಲ್ಯಾಡಿ- ಹೊಸವಕ್ಲು ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಿಂದಿನ ಸಂಪ್ರದಾಯದಂತೆ ಕುಟುಂಬ ಮಿಲನ ಕಾರ್ಯಕ್ರಮ ನಡೆಯಿತು.

[foogallery id=”713″]

ಹೊಸವಕ್ಲು ಕುಟುಂಬದ ಎಲ್ಲ ಸದಸ್ಯರು ಸೇರಿಕೊಂಡು ಸಂಭ್ರಮದಿಂದ ಗೋ ಪೂಜೆ, ಬಲಿಯೇಂದ್ರ ಪೂಜೆ, ತುಳಸಿ ಪೂಜೆ, ದೈವಗಳ ಆರಾಧನೆ,ಗುರುಹಿರಿಯರ ಸ್ಮರಣೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು.ಕುಟುಂಬದ ಹಿರಿಯರಾದ ಮುತ್ತಪ್ಪ ಗೌಡ ಹೊಸವಕ್ಲು ಹಾಗೂ ಶ್ರೀನಿವಾಸ ಗೌಡ ಹೊಸವಕ್ಲು ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಹಬ್ಬವನ್ನು ಆಚರಿಸಲಾಯಿತು. ಕುಟುಂಬದ ಸದಸ್ಯರುಗಳಾದ ಸುಂದರಿ ಹೊಸವಕ್ಲು, ಚಂದ್ರಾವತಿ, ಶ್ರೀಲತಾ, ವಾಸುದೇವ ಗೌಡ, ಧನಂಜಯ ಗೌಡ, ರವಿಚಂದ್ರ ಗೌಡ, ಸುಪ್ರಿತಾ ರವಿಚಂದ್ರ ಗೌಡ, ಸುಮನ, ಅನುರಾಧ, ಹರಿಣಾಕ್ಷಿ, ಸದಾನಂದ, ಭಾರತಿ, ಮೋಹನ, ಮಲ್ಲಿಕಾ, ಬಾಲಕೃಷ್ಣ, ಡಾ.ಸೌಮ್ಯ, ಪ್ರಸನ್ನ, ನಿವೇದಿತಾ, ಸುಧಾ, ಅಪೂರ್ವ, ಕೃತಿಕಾ, ಸ್ವಾತಿ, ಅಭಿರಂಜನ, ಅಭಿರಾಮ್ ಮತ್ತು ಮಕ್ಕಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!