ಸ.ಹಿ.ಪ್ರಾ.ಶಾಲೆ ಬಿಳಿನೆಲೆ ಬೈಲು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪುಸ್ತಕ ವಿತರಣೆ

ಸ.ಹಿ.ಪ್ರಾ.ಶಾಲೆ ಬಿಳಿನೆಲೆ ಬೈಲು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪುಸ್ತಕ ವಿತರಣೆ

ನೇಸರ ಮೇ‌ 20: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಳಿನೆಲೆ ಬೈಲು 2022-23 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸುಮಾರು 15,000/- ಮೌಲ್ಯದ ಬರೆಯುವ ಪುಸ್ತಕವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಉಮೇಶ್ ಪೊಂಬೋಳಿ, ಉಪಾಧ್ಯಕ್ಷರಾದ ವಿನಯ ಕಳಿಗೆ, ಕೋಶಾಧಿಕಾರಿ ರಾಜೇಶ್ ಒಗ್ಗು ಸದಸ್ಯರಾದ ದಯಾನಂದ ಸಣ್ಣಾರ, ಕೇಶವ ಪರ್ಲ. ಮುಖ್ಯಗುರುಗಳಾದ ಶ್ರೀಮತಿ ಸುಮತಿ ಮತ್ತು ಶಿಕ್ಷಕರು ಉಪಸ್ಥಿತಿ ಇದ್ದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಆಮೈ ನಿರೂಪಿಸಿದರು, ಶಿಕ್ಷಕಿ ಶ್ರೀಮತಿ ದಮಯಂತಿ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ

 

ಜಾಹೀರಾತು

Leave a Reply

You May Have Missed

error: Content is protected !!