ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಬ್ರಹ್ಮಶ್ರೀ ಕೇಶವ ಜೋಗಿತ್ತಾಯ ನಿಧನ

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಬ್ರಹ್ಮಶ್ರೀ ಕೇಶವ ಜೋಗಿತ್ತಾಯ ನಿಧನ

ನೇಸರ ಮೇ‌.24: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಬ್ರಹ್ಮಶ್ರೀ‌ ಕೇಶವ ಜೋಗಿತ್ತಾಯ(80ವ) ರವರು ಅಲ್ಪಕಾಲದ ಅಸ್ವಸ್ಥದಿಂದ ಇಂದು ಸಂಜೆ (ಮೇ 24)ರಂದು ಸ್ವಗೃಹದಲ್ಲಿ ನಿಧನರಾದರು.
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅರ್ಚಕರಾಗಿ,‌ ಪ್ರಧಾನ ಅರ್ಚಕರಾಗಿ ಸುಮಾರು 50 ವಷ೯ಗಳ ಸೇವೆ ಸಲ್ಲಿಸಿದ್ದರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಅನುಭವವನ್ನು ಪಡೆದಿದ್ದ ಜೋಗಿತ್ತಾಯ‌ರವರು ಹಲವಾರು ದೇವಸ್ಥಾನಗಳ ನಿಮಾ೯ಣಕ್ಕೆ ಮಾಗ೯ದಶ೯ನ‌ ನೀಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓವ೯ ಪುತ್ರಿ, ಬಂಧು ವಗ೯ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ

Leave a Reply

You May Have Missed

error: Content is protected !!