ಕೊಕ್ಕಡ ಮಾಯಿಲಕೋಟೆಯ ಸನ್ನಿಧಿಯಲ್ಲಿ ಪ್ರಶ್ನಾಚಿಂತನೆ

ಕೊಕ್ಕಡ ಮಾಯಿಲಕೋಟೆಯ ಸನ್ನಿಧಿಯಲ್ಲಿ ಪ್ರಶ್ನಾಚಿಂತನೆ

ನೇಸರ ಮೇ‌.28: ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ಗೌರವಾಧ್ಯಕ್ಷರಾದ ಶ್ರೀದಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜ್ಯೋತಿಷಿ ಶಶಿಧರನ್ ನಾಯರ್, ಕುಟ್ಟಿಕೋಲುರವರು ಮೇ.26 ರಂದು ಪ್ರಶ್ನಾಚಿಂತನೆ ನಡೆಸಿದರು.

ಇತ್ತೀಚೆಗೆ ನಡೆದ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವವು ಪರಿಪೂರ್ಣವಾಗಿ ಯಾವುದೇ ಲೋಪಗಳಿಲ್ಲದೆ ನೆರವೇರಿರುವುದು ಪ್ರಶ್ನೆಯಲ್ಲಿ ಕಂಡುಬಂತು.
ಪ್ರತಿಷ್ಠಾ ವಾರ್ಷಿಕೋತ್ಸವದ ಮೊದಲೇ ಶೀಘ್ರವಾಗಿ ಕ್ಷೇತ್ರದಲ್ಲಿ ನಾಗಪ್ರತಿಷ್ಠೆ ಆಗಬೇಕೆಂದು ಕಂಡುಬಂದಿತು. ಅಲ್ಲದೆ ವಾರದ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ಕ್ಷೇತ್ರದಲ್ಲಿ ಸೇವೆ ನಡೆಸಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ದೇವಾಡಿಗ, ಜಯರಾಮ ಗೌಡ ಹಾರ, ನೇಮಣ್ಣ ಗೌಡ, ಜಯರಾಮ ಗೌಡ ನ್ಯೂ ಅರಿಗ, ದಾಮೋದರ ಗೌಡ ನ್ಯೂ ಅರಿಗ, ವಸಂತ ರಾವ್, ಜಯಾನಂದ ಬಂಟ್ರಿಯಾಲ್, ಶೀನ ನಾಯ್ಕ, ಲಕ್ಷ್ಮೀನಾರಾಯಣ, ಯೋಗೀಶ್ ಆಲಂಬಿಲ, ನಾರಾಯಣ ಹೆಬ್ಬಾರ್, ಸುಂದರ ಗೌಡ, ವಿನಯ ಹಾರ
, ಕುಮಾರ್ ಹಾಗೂ ದೈವದ ಪರಿಚಾರಕರು, ಮಹಿಳಾ ಸಮಿತಿಯ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

You May Have Missed

error: Content is protected !!