ಶ್ರದ್ದಾ ಗೆಳೆಯರ ಬಳಗ ಕೊಕ್ಕಡ-ಉಪ್ಪಾರಪಳಿಕೆ ದಶಮಾನೋತ್ಸವದ ಅಂಗವಾಗಿ “ಶ್ರದ್ದಾ ಟ್ರೋಫಿ 2021” ಪಂದ್ಯಾಟ

ಶ್ರದ್ದಾ ಗೆಳೆಯರ ಬಳಗ ಕೊಕ್ಕಡ-ಉಪ್ಪಾರಪಳಿಕೆ ದಶಮಾನೋತ್ಸವದ ಅಂಗವಾಗಿ “ಶ್ರದ್ದಾ ಟ್ರೋಫಿ 2021” ಪಂದ್ಯಾಟ

ನೇಸರ ನ9: ಶ್ರದ್ದಾ ಗೆಳೆಯರ ಬಳಗ ಕೊಕ್ಕಡ-ಉಪ್ಪಾರಪಳಿಕೆ ದಶಮಾನೋತ್ಸವದ ಅಂಗವಾಗಿ “ಶ್ರದ್ದಾ ಟ್ರೋಫಿ 2021” ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಿತು.
ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಅಲಂಬಿಲ ನೆರವೇರಿಸಿದರು.ಅಧ್ಯಕ್ಷತೆಯನ್ನು ನವೀನ್ ದೇರಜೆ ವಹಿಸಿದ್ದರು, ವೇದಿಕೆಯಲ್ಲಿ ಕೊಕ್ಕಡ ಗ್ರಾಮಪಂಚಾಯತ್ ಉಪಾಧ್ಯಕ್ಷರು ಶ್ರೀಮತಿ ಪವಿತ್ರ,ಸದಸ್ಯರಾದ ಶ್ರೀಮತಿ ಪ್ರಮೀಳಾ. ಉದ್ಯಮಿಗಳಾದ ಉಮೇಶ್ ಗೌಡ ಬಡೆಕಾಯಿಲ್. ಪ್ರಕಾಶ್ ಶಬರಾಯ ವೇದಿಕೆಯಲ್ಲಿದ್ದರು.
ಉಪ್ಪಾರ ಪಳಿಕೆ ಶಾಲೆಯ ಮಕ್ಕಳಿಗೆ ಕ್ರಿಕೆಟ್ ಆಟ ಆಡಲು ಅನುಕೂಲವಾಗುವ ದೃಷ್ಟಿಯಿಂದ ರೂ 30,000 ವೆಚ್ಚದಲ್ಲಿ ಕಾಂಕ್ರೀಟ್ ರೂಟ್ಟ್ಸುನ್ನು ದಶಮಾನೋತ್ಸವ ನಿಮಿತ್ತ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ಶ್ರದ್ದಾ ಗೆಳೆಯರ ಬಳಗದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.ಕೀರ್ತನ್ ಡಿ.ಕೆ.ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಲಿಖಿತ್ ಸುವರ್ಣ ಅರಸೀನಮಕ್ಕಿ ನಿರೂಪಿಸಿದರು, ಮೋಹನ್ ಕೊಡಿಂಗೇರಿ ವಂದಿಸಿದರು.

Leave a Reply

You May Have Missed

error: Content is protected !!