ಜೇಸಿಐ ಉಪ್ಪಿನಂಗಡಿ ವತಿಯಿಂದ “ಅರಣ್ಯ ಬೆಳೆಸೋಣ ಪ್ರಕೃತಿ ಉಳಿಸೋಣ” ಕಾರ್ಯಕ್ರಮಕ್ಕೆ ಚಾಲನೆ

ಜೇಸಿಐ ಉಪ್ಪಿನಂಗಡಿ ವತಿಯಿಂದ “ಅರಣ್ಯ ಬೆಳೆಸೋಣ ಪ್ರಕೃತಿ ಉಳಿಸೋಣ” ಕಾರ್ಯಕ್ರಮಕ್ಕೆ ಚಾಲನೆ

ನೇಸರ ಜೂ.04: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉಪ್ಪಿನಂಗಡಿ ಘಟಕದ ವತಿಯಿಂದ ಜೂನ್ – ಜುಲಾಯಿ ತಿಂಗಳಲ್ಲಿ ನಿರಂತರ ಪರಿಸರ ಸಂರಕ್ಷಣೆ ವಿವಿಧ ಕಾರ್ಯಕ್ರಮಗಳನ್ನು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದೆ.

ಕರ್ನಾಟಕ ಅರಣ್ಯ ಇಲಾಖೆಯ ಗುಂಡ್ಯ ನರ್ಸರಿಗಳಿಂದ ಜೇಸಿಐ ಉಪ್ಪಿನಂಗಡಿ ಘಟಕ ಮತ್ತು ವಿಕ್ರಂ ಯುವಕ ಮಂಡಲ ಸಂಯುಕ್ತ ಆಶ್ರಯದಲ್ಲಿ ವಿವಿಧ ಜಾತಿಯ ಗಿಡಗಳನ್ನು ಘಟಕಾಧ್ಯಕ್ಷ ಜೇಸಿ.ಮೋಹನ್ ಚಂದ್ರ ತೋಟದ ಮನೆ ನೇತೃತ್ವದಲ್ಲಿ ಪಡೆದುಕೊಳ್ಳಯಿತು. ಆ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯದಲ್ಲಿ ವಿಕ್ರಂ ಯುವಕ ಮಂಡಲ ಅಧ್ಯಕ್ಷರಾದ ಜೇಸಿ.ಅನಿಲ್ ಪಿಂಟೊ ಪುಯಿಲ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಸುನಿಲ್ ಮತ್ತು ರಮೇಶ್ ಸಹಕರಿಸಿದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

You May Have Missed

error: Content is protected !!