ಸೌತಡ್ಕ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿಯ ಬಂಧನ

ಸೌತಡ್ಕ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿಯ ಬಂಧನ

ನೇಸರ ನ10: ಸೌತಡ್ಕ ಸಮೀಪ ಕೌಕ್ರಾಡಿ ಗ್ರಾಮದ ನೂಜೆ ನಿವಾಸಿ, ವಿಶ್ವಹಿಂದೂ ಪರಿಷತ್ ಮುಖಂಡ, ಪ್ರಗತಿಪರ ಕೃಷಿಕರೂ ಆಗಿರುವ ನೂಜೆ ತುಕ್ರಪ್ಪ ಶೆಟ್ಟಿ ಅವರ ಮನೆಗೆ ಡಿ.20ರ ರಾತ್ರಿ 1.30ರ ವೇಳೆಗೆ ನುಗ್ಗಿದ ದರೋಡೆಕೋರರ ತಂಡ ತುಕ್ರಪ್ಪ ಶೆಟ್ಟಿಯವರ ಮೇಲೆ ಹಲ್ಲೆ ನಡೆಸಿ ದೂಡಿಹಾಕಿ ಅವರ ಪತ್ನಿಗೆ ಚೂರಿ ಇರಿದು ಮನೆಯಲ್ಲಿದ್ದ ನಗದು, ಚಿನ್ನಾಭರಣ ಲೂಟಿಗೈದು ಪರಾರಿಯಾಗಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದರೋಡೆ ಪ್ರಕರಣದ 17 ಆರೋಪಿಗಳ ಸೆರೆಯಾಗಿತ್ತು, ಈ ಪೈಕಿ ಇದುವರೆಗೂ ಪೋಲಿಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದ ಆರೋಪಿ ಸಲೀಮ್ ಕಾಶಿಪಟ್ಟಣನನ್ನು ಕೊನೆಗೂ ಬಂದಿಸುವಲ್ಲಿ ಉಪ್ಪಿನಂಗಡಿ ಪೋಲಿಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಸಿ ಅರೋಪಿಗಳನ್ನು ಬಂದಿಸಿದ ಪೋಲಿಸರ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

You May Have Missed

error: Content is protected !!