ಅಡ್ಡಹೊಳೆ: ಟ್ಯಾಂಕರ್ ಲಾರಿ ಹಾಗೂ ಮಿನಿ ಬಸ್ಸುಗಳ ಮಧ್ಯೆ ಅಪಘಾತ

ಅಡ್ಡಹೊಳೆ: ಟ್ಯಾಂಕರ್ ಲಾರಿ ಹಾಗೂ ಮಿನಿ ಬಸ್ಸುಗಳ ಮಧ್ಯೆ ಅಪಘಾತ

ನೇಸರ ಜೂ.06: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಟ್ಯಾಂಕರ್ ಲಾರಿ ಹಾಗೂ ಮಿನಿ ಬಸ್ಸುಗಳ ಮಧ್ಯೆ ಅಪಘಾತ. ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರು.
ಮೈಸೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಮಿನಿ ಬಸ್ ಹಾಗೂ ಅದೇ ದಾರಿಯಲ್ಲಿ ಬರುತ್ತಿದ್ದ ಟ್ಯಾಂಕರ್ ಲಾರಿಯ ಮಧ್ಯೆ ಇಂದು(ಜೂ.6)ರ ಬೆಳಗ್ಗೆ ಅಪಘಾತ ಸಂಭವಿಸಿದೆ.
ಮಿನಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ತಕ್ಷಣ ಅವರನ್ನು ನೆಲ್ಯಾಡಿಯ ಅಶ್ವಿನಿ ಆಂಬುಲೆನ್ಸ್ ನಲ್ಲಿ ಕರೆತಂದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಾಹೀರಾತು

Leave a Reply

You May Have Missed

error: Content is protected !!